ಜನಾರ್ದನ ರೆಡ್ಡಿ ಭೇಟಿ ಮಾಡಲಿರುವ ರಾಮುಲು

ಬಳ್ಳಾರಿ: ಆತ್ಮೀಯ ಸ್ನೇಹಿತ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರನ್ನು ಭೇಟಿ ಮಾಡಲು ಬಳ್ಳಾರಿ ಗ್ರಾಮಾಂತರ ನೂತನ ಶಾಸಕ ಶ್ರೀರಾಮುಲು ಸೋಮವಾರ ತೆರಳಲಿದ್ದಾರೆ.

ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮುಲು, ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಹೈದ್ರಾಬಾದ್‌ನ ಜೈಲಿನಲ್ಲಿರುವ ಸ್ನೇಹಿತ ಜನಾರ್ದನ ರೆಡ್ಡಿಯವರನ್ನು ಇಂದು ಭೇಟಿಯಾಗಲಿದ್ದೇನೆ ಎಂದು ಹೇಳಿದ್ದಾರೆ. ನನ್ನ ಸೋಲಿಗಾಗಿ ಬಿಜೆಪಿ ಷಡ್ಯಂತ್ರ ರೂಪಿಸಿತ್ತು. ಇಲ್ಲಿನ ಮತದಾರರು ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ರಾಮುಲು ತಿಳಿಸಿದ್ದಾರೆ.

ವಿಧಾನಸೌದದವರೆಗೆ ಪಾದಯಾತ್ರೆ: ಡಿ. 7 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದೇನೆ. ಅದಕ್ಕೂ ಮೊದಲು ಬೆಂಗಳೂರಿನ ನನ್ನ ನಿವಾಸ ಪಾರಿಜಾತದಿಂದ ವಿಧಾನಸೌದವರೆಗೆ ನನ್ನ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮಾಡಲಿದ್ದೇನೆ ಎಂದಿರುವ ರಾಮುಲು, ಮಾರ್ಗ ಮಧ್ಯೆದಲ್ಲಿ ಅಂಬೇಡ್ಕರ್, ಬಸವಣ್ಣ, ಗಾಂಧೀಜಿ ಪುತ್ಥಳಿಗೆ ಮಾಡಲಿದ್ದಾರೆ.

Please follow and like us:
error