ಮಕ್ಕಳ ದಿನಾಚರಣೆ ಹಾಗೂ ತಾಯಂದಿರಿಗೆ ತಿಳುವಳಿಕೆ ಕಾರ್ಯಕ್ರಮ

 ದಿನಾಂಕ ೨೨-೧೧-೨೦೧೪ ರಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ದಿ ಯೊಜನೆಯಿಂದ  ಕೊಪ್ಪಳ ನಗರದ ೧೧ನೇ. ೧೨ನೇ, ೧೩ನೇ ವಾರ್ಡಿನ ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ತಾಯಂದಿರಿಗೆ ತಿಳುವಳಿಕೆ ಕಾರ್ಯಕ್ರಮವನ್ನು ಆಯೀಜಿಸಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಲತಾ ವೀರಣ್ಣ ಸೊಂಡೂರು ಆಗಮಿದ್ದರು. ಕೊಪ್ಪಳ ನಗರಸಭೆ ಸದಸ್ಯೆ ಶ್ರೀಮತಿ ಸರಿತಾ ಸುಧಾಕರ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಮಖ್ಯ ಅತಿಥಿಗಳಾಗಿ ಶ್ರೀಮತಿ ರೇಣುಕಾ. ಪೂಜಾರ (ನಗರಸಭೆ ಸದಸ್ಯರು), ವಿರೇಶ. ನಿಡುಗುಂದಿ ಶಿಕ್ಷಕರು ಊPS ಕೊಟಗಾರಗೇರಾ  ಕೊಪ್ಪಳ, ಚಿತ್ರಗಾರ. ಹಿ.ಆ.ಸ. ನಗರ ಆರೋಗ್ಯಕೇಂದ್ರ ಕೊಪ್ಪಳ, ವ್ಹಿ.ಡಿ. ಕುಲಕರ್ಣಿ ಸಂಯೋಜಕರು ಅರುಣೋದಯ ಸಂಸ್ಥೇ ಕೊಪ್ಪಳ ಭಾಗವಹಿಸಿದ್ದರು. ಈ ಕಾರ್ಯಕ್ರಮದ  ನಿರೂಪಣೆಯನ್ನು ಪದ್ಮಾವತಿ ಅಂ.ಕಾ ನಿರೂಪಿಸಿದರು,  ಕೊನೆಯಲ್ಲಿ  ವಂದನಾರ್ಪಣೆಯನ್ನು ನಿರ್ಮಲಾ ಅಂಗನವಾಡಿ ಕಾರ್ಯಕರ್ತೆ ನೆರವೆರಿಸಿದರು. ಊPS ಕೊಟಗಾರ ಗೇರಾ ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ  ಆರಂಭಿಸಲಾಯಿತು ಹಾಗೂ ಸ್ವಾಗತವನ್ನು ಸಿದ್ದಮ್ಮ ಅಂಗನವಾಡಿ ಕಾರ್ಯಕರ್ತೆ ನೇರೆವೆರಿಸಿದರು.
Please follow and like us:
error

Related posts

Leave a Comment