ಸರ್ಕಾರಿ ಅಂಗವಿಕಲ ನೌಕರರಿಗೂ ರಿಯಾಯತಿ ದರದ ಬಸ್ ಪಾಸು ಸೌಲಭ್ಯ

ಕೊಪ್ಪಳ: ನಿರುದ್ಯೋಗಿ ಅಂಗವಿಕಲರಿಗೆ ನೀಡಲಾಗುವ ರಿಯಾಯತಿ ದರದ ಬಸ್ ಪಾಸು ಸೌಲಭ್ಯದ ಯೋಜನೆಯನ್ನು ಸರ್ಕಾರಿ ಅಂಗವಿಕಲ ನೌಕರರಿಗೂ ಪಡೆಯುವ ಸೌಲಭ್ಯವಿದ್ದರೂ ಕೂಡಾ ಕ.ರಾ.ರ.ಸಾ.ನಿಗಮವು ಈ ಯೋಜನೆಯು ಸೌಲಭ್ಯವು ನಿರುದ್ಯೋಗ ಅಂಗವಿಕಲರಿಗೆ ಮಾತ್ರವಿದ್ದು ಸರ್ಕಾರಿ ಅಂಗವಿಕಲ ನೌಕರರ ಆದಾಯ ಮೀತಿ ಹೆಚ್ಚಿರುವುದರಿಂದ ಅವರಿಗೆ ನೀಡಲಾಗುವುದಿಲ್ಲವೆಂಬ ತಮ್ಮದೆಯಾದ ಆದೇಶವನ್ನು ಮಾಡಿ ಇಲ್ಲಿಯವರೆಗೂ ಬಸ್ ಪಾಸಿನ ಸೌಲಭ್ಯವನ್ನು ಸರ್ಕಾರಿ ಅಂಗವಿಕಲ ನೌಕರರಿಗೆ ನೀಡದೆ ಅವರನ್ನು ಸೌಲಭ್ಯದಿಂದ ವಂಚಿಸಿದ್ದಾರೆ.ಎಲ್ಲಾ ಅಂಗವಿಕಲರಿಗೆ ನೀಡಲಾಗುವ ಬಸ್ ಪಾಸಿನ ಸೌಲಭ್ಯವನ್ನು ನೀಡಲು ತಾರತಮ್ಯವೇಸಗಿದ್ದಾರೆ.ನಮ್ಮ ಸಂಘದ ವತಿಯಿಂದ ಡಿ.೨೮ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ನೌಕರರ ರಾಜ್ಯ ಸಮ್ಮೇಳನದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಿದಾಗ ಬಸ್ ಪಾಸಿನ ಸೌಲಭ್ಯವನ್ನು ಸರ್ಕಾರ ಎಲ್ಲಾ ಅಂಗವಿಕಲರಿಗೆ ನೀಡಿದ್ದು ಕೇಲವಂದು ಜಿಲ್ಲೆಗಳಲ್ಲಿ ಸರ್ಕಾರಿ ಅಂಗವಿಕಲ ನೌಕರರಿಗೆ  ಪಾಸ ನೀಡಲು ತಾರತಮ್ಯ ಮಾಡುತ್ತಿದ್ದು ಅಂಥಹ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುವುದು ಎಂಬ ಆದೇಶವನ್ನು ಹೊರಡಿಸುವುದರೊಂದಿಗೆ ಸರ್ಕಾರಿ ಅಂಗವಿಕಲ ನೌಕರರು ಕೂಡಾ ರಿಯಾಯತಿ ದರದ ಬಸ್ ಪಾಸಿನ ಸೌಲಭ್ಯವನ್ನು ಪಡೆಯಲು ಸೂಚಿಸಿದ್ದಾರೆ.ಆದ್ದರಿಂದ ಸರ್ಕಾರಿ ಅಂಗವಿಕಲ ನೌಕರರು ಕೂಡಾ ಈ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮತ್ತು ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ ತಿಳಿಸಿದ್ದಾರೆ.

Leave a Reply