You are here
Home > Koppal News > ಆನೆಗುಂದಿ ಉತ್ಸವ ಆಚರಿಸದಿದ್ದರೆ ಉಗ್ರ ಹೋರಾಟ- ಕರವೇ ಪಿ.ಕೃಷ್ಣೇಗೌಡ

ಆನೆಗುಂದಿ ಉತ್ಸವ ಆಚರಿಸದಿದ್ದರೆ ಉಗ್ರ ಹೋರಾಟ- ಕರವೇ ಪಿ.ಕೃಷ್ಣೇಗೌಡ

ಕೊಪ್ಪಳ : ರಾಜ್ಯ ಸರ್ಕಾರ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹಂಪಿ ಉತ್ಸವ ಆಚರಿಸುತ್ತದೆ. ಆದರೆ ವಿಜಯನಗರದ ಸಾಮ್ರಾಜ್ಯದ  ಮೂಲ ನೆಲೆಯಾಗಿರುವ ಆನೆಗುಂದಿ ಉತ್ಸವ ಆಚರಿಸುವಲ್ಲಿ  ತಾರತಮ್ಯ ಮಾಡುತ್ತಿದೆ.  ಮುಂದಿನ ಪೀಳಿಗೆಗೆ  ಇತಿಹಾಸದ ಅರಿವು  ಹೆಚ್ಚಿಸಲು ಮತ್ತು ಪ್ರವಾಸೋಧ್ಯಮವನ್ನು ಅಭಿವೃದ್ದಿಗೊಳಿಸಲು  ಈ ಉತ್ಸವ ಆಚರಿಸಲೇಬೇಕು. ಸರಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಸರಕಾರಕ್ಕೆ ಇನ್ನೂ ಒಂದು ವಾರದ ಗಡುವು ನೀಡುತ್ತೇವೆ. ಉತ್ಸವದ ಆಚರಣೆಯ ದಿನಾಂಕ ನಿಗದಿ ಮಾಡಬೇಕು ಇಲ್ಲದಿದ್ದರೆ ಕರವೇ ಸ್ವಾಭಿಮಾನಿ ಬಳಗವೇ ಮುಂದೆ ನಿಂತು ಉತ್ಸವ ಆಚರಿಸುತ್ತದೆ ಎಂದು ಕರವೇ ( ಸ್ವಾಭಿಮಾನಿ ಬಣ) ದ ರಾಜ್ಯಾಧ್ಯಕ್ಷ ಪಿ.ಕೃಷ್ಣೆಗೌಡ ಹೇಳಿದರು. ಅವರು ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 
ಇಲ್ಲಿಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಅಲ್ಲದೇ ಕೊಪ್ಪಳ ಮತ್ತು ಬಳ್ಳಾರಿಯ ಉಸ್ತುವಾರಿ ಸಚಿವರು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಹಂಪಿಯ ಉತ್ಸವದ ದಿನಾಂಕ ಈಗಾಗಲೇ ನಿಗದಿಮಾಡಲಾಗಿದೆ. ಆದರೆ ಆನೆಗುಂದಿಯ ಉತ್ಸವದ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ. ಈ ನಿರ್ಲಕ್ಷ್ಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಿ.ಕೃಷ್ಣೆಗೌಡರು ಮುಂದಿನ ದಿನಗಳಲ್ಲಿ ಇಲ್ಲಿಯ ನೆಲ,ಜಲ ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಆರ್.ಪ್ರಭು, ಬಳ್ಳಾರಿ ಜಿಲ್ಲಾಧ್ಯಕ್ಷ ಕುರಗೋಡು ಚನ್ನಬಸವರಾಜು,ಕೊಪ್ಪಳ ಜಿಲ್ಲಾಧ್ಯಕ್ಷ ರಾಜೇಶ್ ಅಂಗಡಿ, ಗದಗ ಜಿಲ್ಲಾಧ್ಯಕ್ಷ ಮಾರುತಿ ಎಂ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply

Top