ದಲಿತ ಪ್ಯಾಂಥರ್ಸ್‌ನಿಂದ ಅಪರಜಿಲ್ಲಾಧಿಕಾರಿಗಳಿಗೆ ಮನವಿ.

 ಜನೆವರಿ ೨೬ ಗಣರಾಜ್ಯೋತ್ಸವದಂದು ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಅರೆ ಸರಕಾರಿ ಕಛೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ  ಸಂವಿಧಾನ ಶಿಲ್ಪಿ, ಡಾ| ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಣೆ ಮಾಡಿ ನಂತರ ಧ್ವಜಾರೋಹಣ ನೆರವೇರಿಸಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಅಪರಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಅವರಿಗೆ ಹಾಗೂ ಜಿಲ್ಲಾಧಿಕಾರಿ ಕಛೇರಿ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಜಿಲ್ಲಾಧ್ಯಕ್ಷ ನಾಗರಾಜ್ ಬೆಲ್ಲದ್, ಬಸವರಾಜ್ ಅಳ್ಳಳ್ಳಿ, ವೆಂಕಟೇಶ್ ಬೆಲ್ಲದ್, ಗೌತಮ್ ಬಳಗಾನೂರ, ಮಂಜುನಾಥ ದೊಡ್ಡಮನಿ, ನಾಗರಾಜ್ ಮಂಗಳೂರ, ರಾಘವೇಂದ್ರ ಕೆ, ಶರಣಪ್ಪ ದಾಸರ್, ಅಜೀಜ್, ಸುರೇಶ್ ಬೇಲೂರ್, ಹುಲ್ಲೇಶ್.ಪಿ. ಇದ್ದರು.

Leave a Reply