ದಿನಗೂಲಿ ಗುತ್ತಿಗೆ ಪೌರಕಾರ್ಮಿಕರ ಧರಣಿ ೫ನೇ ದಿನಕ್ಕೆ.

ಗಂಗಾವತಿ-

೧೭-೦೮-೨೦೧೫ ರಿಂದ ಪ್ರಾರಂಭವಾದ ಗುತ್ತಿಗೆ ಪೌರ ಕಾರ್ಮಿಕರ ಧರಣಿ ಸತ್ಯಾಗ್ರಹ ೫ನೇ ದಿನ, ಇದರಲ್ಲಿ ನಗರಸಭೆಯ ಗುತ್ತಿಗೆ ಪೌರ ಕಾರ್ಮಿಕರು ೧೪೦ ಜನ ಭಾಗವಹಿಸಿದ್ದಾರೆ. ಫುಟ್‌ಪಾತ್ ಮೇಲೆ ಅಡಿಗೆ ಮಾಡಿ ಮಧ್ಯಾಹ್ನ ಎಲ್ಲಾ ಕಾರ್ಮಿಕರು ಸಾಲಾಗಿ ಕುಳಿತು ಊಟ ಮಾಡಿದರು.  ಧರಣಿ ಸತ್ಯಾಗ್ರಹದಲ್ಲಿ ಕಾರ್ಮಿಕರು ಮುಂದಿನ ದಿನಗಳಲ್ಲಿ ಹೋರಾಟವನ್ನು ಉಗ್ರವಾಗಿ ನಡೆಸಲು ಮತ್ತು ಸೋಮವಾರದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ನಿರ್ಧರಿಸಲಾಯಿತು ಎಂದು ಕೆ.ಜಿ.ಎಲ್.ಯು.ನ ನಗರ ಘಟಕ ಅಧ್ಯಕ್ಷ ಪರಶುರಾಮ ತಿಳಿಸಿದ್ದಾರೆ.

Please follow and like us:
error