ಕೊಪ್ಪಳ ಜಿಲ್ಲಾ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಸ್. ವಿ. ಪಾಟೀಲ್ ಗುಂಡೂರ ಆಯ್ಕೆ

ಕೊಪ್ಪಳ : ೨೦೧೪  ಫೆಬ್ರುವರಿ ೮, ೯, ರಂದು ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಜರುಗಲಿರುವ ಕೊಪ್ಪಳ ಜಿಲ್ಲಾ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ  ಗುಂಡೂರಿನ ನಾಟಕಕಾರ, ರಂಗಕರ್ಮಿ ಹಾಗೂ ಸಾಹಿತಿ ಎಸ್. ವಿ. ಪಾಟೀಲ್ ಗುಂಡೂರ ಅವರನ್ನು ಜನೇವರಿ ೪ ರಂದು ನಡೆದ ಜಿಲ್ಲಾ ಕನ್ನಡ ಸಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಬೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
                     

ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿರಣ್ಣ ನಿಂಗೋಜಿ, ಗೌರವಕಾರ್ಯದರ್ಶಿಗಳಾದ ಶಿವಾನಂದ ಮೇಟಿ, ಅಕ್ಬರ ಸಿ. ಕಾಲಿಮಿರ್ಚಿ, ಗೌರವಕೋಶಾಧ್ಯಕ್ಷ ಆರ್.ಎಸ್. ಸರಗಣಾಚಾರ, ಪ.ಜಾ, ಪ. ಪಂಗಡ ಪ್ರತಿನಿಧಿ ಪರಶುರಾಮ ಪ್ರಿಯ, ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ, ಕೊಪ್ಪಳ ತಾಲೂಕ ಕಸಾಪ ಅಧ್ಯಕ್ಷ ಶಿಕಾ ಬಡಿಗೇರ, ಗಂಗವತಿ ತಾಲೂಕ  ಕಸಾಪ ಅಧ್ಯಕ್ಷ ಅಜಮೀರ ನಂದಾಪೂರ, ಕುಷ್ಟಗಿ ತಾಲೂಕ ಕಸಾಪ ಅಧ್ಯಕ್ಷ ಚಂದಪ್ಪ ಹಕ್ಕಿ ಹಾಗೂ ಯಲಬುರ್ಗಾ ತಾಲೂಕ ಕಸಾಪ ಅಧ್ಯಕ್ಷ ಶಿವಮೂರ್ತಿ ಇಟಗಿ ಉಪಸ್ಥಿತರಿದ್ದರು.

Please follow and like us:

Leave a Reply