ಈ ದಾಖಲೆಗಳಿದ್ದಲ್ಲಿ ಮತ ಚಲಾವಣೆ ಮಾಡಬಹುದು

ಕೊಪ್ಪಳ ಸೆ. ೨೨ (ಕರ್ನಾಟಕ ವಾರ್ತೆ)- ಭಾರತೀಯ ಚುನಾವಣಾ ಆಯೋಗವು ಇದುವರೆಗೂ ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್ ಹೊಂದಿಲ್ಲದಿರುವ ಮತದಾರರಿಗೆ, ಸೆ. ೨೬ ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಈ ಕೆಳಕಂಡ ೨೧ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಮತದಾನ ಸಂದರ್ಭದಲ್ಲಿ ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಿದೆ.
೧) ಪಾಸ್‌ಪೋರ್ಟ್
೨) ವಾಹನ ಚಾಲನೆ ಪರವಾನಗಿ ಪತ್ರ
೩) ಆದಾಯ ತೆರಿಗೆ ಪಾನ್ ಕಾರ್ಡ್
೪) ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಸಾರ್ವಜನಿಕ ಉದ್ದಿಮೆಗಳು/ ಸ್ಥಳೀಯ ಸಂಸ್ಥೆಗಳು/ ಸಾರ್ವಜನಿಕ ನಿಯಮಿತ ಕಂಪನಿಗಳು ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಪತ್ರ
೫) ಬ್ಯಾಂಕುಗಳು/ ಅಂಚೆಕಚೇರಿ/ ಕಿಸಾನ್ ಪಾಸ್‌ಬುಕ್ (ಭಾವಚಿತ್ರ ಸಹಿತ) (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೬) ಭಾವಚಿತ್ರ ಸಹಿತ ಇರುವ ಆಸ್ತಿ ದಾಖಲಾತಿಗಳು ಅಂದರೆ ಭೂಮಿ ಪಟ್ಟ, ನೋಂದಾಯಿತ ಇತರೆ ದಾಖಲಾತಿಗಳು.
೭) ಪ.ಜಾತಿ / ಪ.ಪಂಗಡ/ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡುವ ಫೋಟೋ ಸಹಿತ ಪ್ರಮಾಣ ಪತ್ರ. (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೮) ಭಾವಚಿತ್ರವಿರುವ ಪಿಂಚಣಿ ದಾಖಲೆಗಳಾದ ಮಾಜಿ ಸೈನಿಕರ ಪಿಂಚಣಿ ಪುಸ್ತಕ/ ಪಿಂಚಣಿ ಮಂಜೂರಾತಿ ಆದೇಶ/ ಮಾಜಿ ಸೈನಿಕರ ವಿಧವೆ ಹಾಗೂ ಅವಲಂಬಿತರ ಪ್ರಮಾಣ ಪತ್ರ/ ವೃದ್ಧಾಪ್ಯ ವೇತನ/ ವಿಧವಾ ವೇತನ ಮಂಜೂರಾತಿ ಆದೇಶ (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೯) ಸ್ವಾತಂತ್ರ್ಯ ಯೋಧರಿಗೆ ನೀಡಿರುವ ಭಾವಚಿತ್ರವಿರುವ ಗುರುತಿನ ಪತ್ರ
೧೦) ಶಸ್ತ್ರಾಸ್ತ್ರ ಪರವಾನಗಿ ಪತ್ರ  (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೧೧) ಭಾವಚಿತ್ರವಿರುವ ದೈಹಿಕ ಅಂಗವೈಕಲ್ಯತೆ ಪ್ರಮಾಣ ಪತ್ರ (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೧೨) ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಪತ್ರಗಳು  (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೧೩) ಆರೋಗ್ಯ ವಿಮಾ ಯೋಜನೆಯ ಭಾವಚಿತ್ರವಿರುವ ಸ್ಮಾರ್ಟ್ ಕಾರ್ಡ್ (ಕಾರ್ಮಿಕ ಸಚಿವಾಲಯ ಯೋಜನೆಯಡಿ  ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೧೪) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು (ದಿ: ೩೧-೭-೨೦೧೧ ರ ಮುಂಚಿತವಾಗಿ ನೀಡಿದ) ಭಾವಚಿತ್ರವಿರುವ ವಿದ್ಯಾರ್ಥಿ ಗುರುತಿನ ಚೀಟಿ.
೧೫) ಭಾವಚಿತ್ರವಿರುವ  ದಿ: ೩೧-೭-೨೦೧೧ ಕ್ಕೂ ಮೊದಲು ನೀಡಿದ ಪಡಿತರ ಚೀಟಿ
೧೬) ಮಾಜಿ ಯೋಧರಿಗೆ ನೀಡಿದ ಭಾವಚಿತ್ರವಿರುವ ಸಿ.ಎಸ್.ಡಿ. ಕ್ಯಾಂಟೀನ್ ಕಾರ್ಡ್
೧೭) ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಚೀಟಿ  (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೧೮) ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್ (ದಿ: ೩೧-೭-೨೦೧೧ ರ ಮುಂಚಿತವಾಗಿ ಪಡೆದ)
೧೯) ಸ್ಥಳೀಯ ಸಂಸ್ಥೆಗಳು ಅಂದರೆ ಮಹಾ ನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾ.ಪಂ. ಗಳು ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ.
೨೦) ಸರ್ಕಾರದಿಂದ ನೀಡಿದ ಭಾವಚಿತ್ರ ಸಹಿತ ಹಿರಿಯ ನಾಗರೀಕರ ಗುರುತಿನ ಚೀಟಿ
೨೧) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದ ಕುಟುಂಬ ಸದಸ್ಯರ ಹೆಸರು, ವಯಸ್ಸು, ಹಾಗೂ ಸದಸ್ಯರು
    ಕುಟುಂಬದ ಮುಖ್ಯಸ್ಥರೊಂದಿಗೆ ಇರುವ ಸಂಬಂಧದ ವಿವರ ಒಳಗೊಂಡ ಭಾವಚಿತ್ರವಿರುವ ಮೂಲ  ಪಡಿತರ ಚೀಟಿ.
    ಮೇಲ್ಕಾಣಿಸಿದ ದಾಖಲೆಗಳ ಪೈಕಿ ಯಾವುದೇ ಒಂದು ದಾಖಲೆಯನ್ನು ಹಾಜರುಪಡಿಸಿದಲ್ಲಿ ಅಂತಹ ಮತದಾರರಿಗೆ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ. 
Please follow and like us:
error