ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ

ಕೊಪ್ಪಳ : ನಗರದ ಸಾರ್ವಜನಿಕ ಮೈದಾನದಲ್ಲಿ ೬೪ ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಂಜೆ ನೆಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ಕಲಾ ವೃಂದದ ವತಿಯಿಂದ ಐತಿಹಾಸಿಕ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಾಟಕ ಪ್ರದರ್ಶನವಿದೆ. 
ನಾಟಕವು ಒಂದು ಘಂಟೆ ಅವಧಿಯದಾಗಿದ್ದು, ೧೮ ನೇ ಶತಮಾನದಲ್ಲಿ ಜಾತಿಪದ್ದತಿ, ಭ್ರಷ್ಟಾಚಾರ, ಜಮೀನ್ದಾರಿ ಪದ್ದತಿಯ ವಿರುದ್ದ ಬಂಡೆದ್ದು, ಗೆರಿಲ್ಲಾ ತಂತ್ರದಿಂದ ಬ್ರಿಟಿಷರ ವಿರುದ್ಧ ಸಮರ ಸಾರಿದ ಸಿಂಹ, ಸಂಗೊಳ್ಳಿಯ ನಿಸ್ವಾರ್ಥ ಜೀವಿ, ದೇಶಪ್ರೇಮಿ ರಾಯಣ್ಣನ ಯಶೋಗಾಥೆ ಈ ನಾಟಕದಲ್ಲಿ ಅನಾವರಣಗೊಳ್ಳಲಿದೆ ಎಂದು ಶಿಕ್ಷಕರ ಕಲಾ ವೃಂದದ ಪ್ರಾಣೇಶ ಪೂಜಾರ  ತಿಳಿಸಿದ್ದಾರೆ. 
Please follow and like us:
error