ಮಾಧ್ಯಮಿಕ ಶಿಕ್ಷಕ ಸಂಘದಿಂದ ಸಿ.ಸಿ.ಇ ತರಬೇತಿ.

ಕೊಪ್ಪಳ-16- ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕೊಪ್ಪಳ ಹಾಗೂ ರಾಜೀವಗಾಂಧಿ ಬಿ.ಇಡಿ ಮಹಾದ್ಯಾಲಯ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ (ಸಿ.ಸಿ.ಇ) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಕುರಿತಂತೆ ಒಂದು ದಿನದ ತರಬೇತಿಯನ್ನು ನೀಡಲಾಯಿತು.
    ಸಮಾರಂಭದ ಅಧ್ಯಕ್ಷತೆಯನ್ನು ರಾಜೀವಗಾಂಧಿ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿನೋದ ಹೂಲಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ದೇವರಡ್ಡಿ. ಬಿ, ಸೋಮಶೇಖರ ಚ. ಹರ್ತಿ ಜಿಲ್ಲಾ ಅಧ್ಯಕ್ಷರು ಮಾಧಮಿಕ ಶಿಕ್ಷಕರ ಸಂಘ ಕೊಪ್ಪಳ ಇವರು ಸುಮಾರು ೧೦೦ ಜನ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿದರು.
    ಸಭೆಯ ಅಧ್ಯಕ್ಷತೆ ವಹಿಸ ಮಾತನಾಡಿದ ವಿನೋದ ಹೂಲಿ ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಆಗುವುದರ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡಲು ಅನುಕೂಲವಾಗಲಿದೆ ಎಂದರು. ಮಾಧ್ಯಮಿಕ ಶಿಕ್ಷಕರ ಸಂಘದ ಕೆಲಸ ಜಿಲ್ಲೆಯ ಎಲ್ಲಾ ಡಿ.ಈಡಿ ಹಾಗೂ ಬಿ.ಈಡಿ ಕಾಲೇಜುಗಳಿಗೆ ವಿಸ್ತರಿಸಲು ಕರೆ ನೀಡಿದರು. ಜಿಲ್ಲಾ ಗೌರವಾಧ್ಯಕ್ಷ ಅಶೋಕ ಭದ್ರಶೆಟಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ವಿ. ಜಿ. ಪಾಟೀಲ, ತಾಲುಕ ಅಧ್ಯಕ್ಷ ಚನ್ನಬಸಪ್ಪ ಹಮ್ಮಿಗಿ, ಗೋಪಾಲ ಜೋಶಿ ಸಾಂದರ್ಭಿಕವಾಗಿ ಮಾತನಾಡಿದರು.
        ಹುಸೇನ ಪಾಷಾ ಇಟಗಿ ತಾಲೂಕ ಉಪಾಧ್ಯಕ್ಷರು ರಾಜೀವಗಾಂಧಿ ಬಿ,ಈಡಿ ಮಹಾವಿದ್ಯಾಲಯದ ಉಪನ್ಯಾಸಕರಾದ ಮಲ್ಲಪ್ಪ ಅಂಬಿಗ, ಮಹೇಶ ಪೂಜಾರ, ರಾಚಮ್ಮ, ಶೋಭಾ ಸಜ್ಜನ ಉಪಸ್ಥಿತರಿದ್ದರು.

Please follow and like us:
error