ದಯಾನಂದ ಸಾಗರ.ಎಸ್.ಗೆ ಸನ್ಮಾನ

 

ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೧೪-೧೫ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ತಾಲೂಕ ಮಟ್ಟದ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಯುವ ರಂಗ ಕಲಾವಿದನಾದ ಹಾಗೂ ಗಬ್ಬೂರ ಶಾಲೆ ಶಿಕ್ಷಕರಾದ ದಯಾನಂದ ಸಾಗರ ಎಸ್.ರವರನ್ನು  ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಸಿ.ಪಿ.ಎಸ್.ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

  ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಮುತ್ತುರಾಜ ಕುಷ್ಟಗಿ,ಶಿಕ್ಷಣ ಸಂಯೋಜಕರಾದ ಎಸ್.ಬಿ.ಕುರಿ,ಹನುಮಂತಪ್ಪ ನಾಯಕ,ಶ್ರೀನಿವಾಸ.ಪಿ.,ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಶಿಕ್ಷಕರಾದ ಮೆಹೆಬೂಬ್.ಎಂ.ಅಳವಂಡಿ, ನಾಗಪ್ಪ ನರಿ,ವಿರುಪಾಕ್ಷಪ್ಪ ಬಾಗೋಡಿ,ಗುರುರಾಜ ಕಟ್ಟಿ,ಶ್ರೀನಿವಾಸ ಕುಲಕರ್ಣಿ,ಜೀವನಸಾಬ ಬಿನ್ನಾಳ,ಮುರಳಿಧರ ಶಿಂಗ್ರಿ ಮುಂತಾದವರು ಹಾಜರಿದ್ದರು.

Leave a Reply