ಮೋಚಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಕೊಪ್ಪಳ : ಕೊಪ್ಪಳ ಜಿಲ್ಲಾ ಮೋಚಿಗಾರ (ಮೋಚಿ) ಸಮಾಜ ಕ್ಷೇಮಾಭಿವೃದ್ಧಿ ಸಂಘ ಕೊಪ್ಪಳ ದಿಂದ ಜಿಲ್ಲೆಯ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಫೆಬ್ರವರಿ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗಿದೆ.  ಆದ್ದರಿಂದ ೨೦೧೨-೧೩ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ತಾಲೂಕಿಗೆ ಇಬ್ಬರಂತೆ ಹಾಗೂ ಪಿ.ಯು.ಸಿ. ದ್ವಿತೀಯ ತರಗತಿಯ ವಿದ್ಯಾರ್ಥಿಗಳಲ್ಲಿ ಕಲಾ, ವಾಣಿಜ್ಯ & ವಿಜ್ಞಾನ ವಿಭಾಗಗಳಿಗೆ ತಾಲೂಕಿಗೆ ಒಬ್ಬರಂತೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗುವುದು.  ಕಾರಣ ಸಮಾಜದ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯೊಂದಿಗೆ ೩೧-೦೧-೨೦೧೪ರ ಒಳಗಾಗಿ ಆಯಾ ತಾಲೂಕಿನ ಸಮಾಜದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರನ್ನು ಸಂಪರ್ಕಿಸಲು ಜಿಲ್ಲಾಧ್ಯಕ್ಷರಾದ   ದಾನಪ್ಪ ಜಿ. ಕವಲೂರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ದಾನಪ್ಪ ಜಿ. ಕವಲೂರ ಮೊ:೯೪೪೮೨೬೩೦೦೩, email
danappagk@gmail.com   

 ಸಂಪರ್ಕಿಸಬಹುದಾಗಿದೆ.

Leave a Reply