ಜಿಲ್ಲೆಯಲ್ಲಿ ಜು.೨೮ ರಿಂದ ವೈದ್ಯಕೀಯ ತಪಾಸಣೆ ಶಿಬಿರ

 ಪ್ರಸಕ್ತ ಸಾಲಿಗೆ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವಿಶೇಷ ನ್ಯೂನ್ಯತೆಯುಳ್ಳ ಮಕ್ಕಳಿಗೆ ಇಲಾಖೆಯಿಂದ ತಾಲೂಕ ಮಟ್ಟದಲ್ಲಿ ವೈದ್ಯಕೀಯ ತಪಾಸಣೆ ಶಿಬಿರವನ್ನು ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಜೂನ್-೨೮ ರಿಂದ ಜುಲೈ-೦೨ ರವರೆಗೆ ಹಮ್ಮಿಕೊಳ್ಳಲಾಗಿದೆ. 
ಜೂ.೨೮ ರಂದು ಗಂಗಾವತಿಯ ಜುಲಾಯಿ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜೂ.೨೯ ರಂದು ಕೊಪ್ಪಳ ನಗರದ ಸ್ಷೇಶನ್ ಎದಿರುಗಡೆ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜು.೦೧ ರಂದು ಕುಷ್ಟಗಿಯ ಸರಕಾರಿ ಹಿರಿಯ ಪ್ರಾಥಮಿಕ (ಬಾಲಕರ)ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜು.೦೨ ರಂದು ಯಲಬುರ್ಗಾದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರದ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 
ವೈದ್ಯಕೀಯ ಶಿಬಿರದಲ್ಲಿ ತಾಲೂಕಿನ ೬-೧೪ ವರ್ಷದೊಳಗಿನ ಶಾಲೆಯಲ್ಲಿ ದಾಖಲಾಗಿರುವ ವಿಶೇಷ ನ್ಯೂನ್ಯತೆಯುಳ್ಳ ಮಕ್ಕಳ ಪಟ್ಟಿಯನ್ನು ಐ.ಇ.ಆರ್.ಟಿ ಗಳು ಹೊಂದಿದ್ದು, ಶೇ.೪೦% ಕ್ಕಿಂತ ಹೆಚ್ಚಿನ ನ್ಯೂನ್ಯತೆಯನ್ನು ಹೊಂದಿದ ಮಕ್ಕಳನ್ನು ಶಿಬಿರಕ್ಕೆ ಕರೆತರುವುದು. ಈ ಹಿಂದೆ ಇಲಾಖೆಯಿಂದ ವೈದ್ಯಕೀಯ ತಪಾಸಣೆ ಮಾಡಲಾದ ಹಾಗೂ ಸಾಧನಾ ಸಾಮಗ್ರಿಗಳನ್ನು ಪಡೆದ ಮಕ್ಕಳನ್ನು ಹೊರತುಪಡಿಸಿ ಉಳಿದ ಮಕ್ಕಳನ್ನು ತಾಲೂಕ ಮಟ್ಟದಲ್ಲಿ ನಡೆಯುವ ವೈದ್ಯಕೀಯ ಶಿಬಿರಕ್ಕೆ ಕರೆತರುವಲ್ಲಿ ಸಂಬಂಧಿಸಿದ ಸಿ.ಆರ್.ಪಿ., ಹಾಗೂ ಐ.ಇ.ಆರ್.ಟಿಗಳ ಜವಾಬ್ದಾರಿಯಾಗಿದ್ದು, ಶಿಬಿರ ನಡೆಯುವ ದಿನಾಂಕದಂದು ಸಂಬಂಧಿಸಿದ ಐ.ಇ.ಆರ್.ಟಿ. ಗಳು ಎಲ್ಲಾ ಸಿ.ಆರ್.ಪಿ. ಗಳು ಹಾಜರಿದ್ದು, ವೈದ್ಯಕೀಯ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪನಿರ್ದೇಶಕರು ತಿಳಿಸಿದ್ದಾರೆ.

Leave a Reply