ಕವನ ರಚನೆಗೆ ಅಂತರಂಗದ ಭಾವನೆ ಮುಖ್ಯ- ಸಾವಿತ್ರಿ ಮುಜುಂದಾರ.

ಇಂದು ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೨೦೧೪-೧೫ ನೇ ಸಾಲಿನ ಕನ್ನಡ ಭಾಷ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯಯರಾದ ಶ್ರೀಮತಿ ಸಾವಿತ್ರಿ ಮುಜುಂದಾರ್ ಮಾತನಾಡಿ  ಕವನ ರಚನೆಗೆ ಅಂತರಂಗದ ಭಾವನೆ ಮುಖ್ಯ ಅಂತಹ ಕವನದಲ್ಲಿ ಅಂತಸತ್ವತೆ ಇರಬೇಕು ಎಂದರು ಹಾಗೆಯೆ ಅನುಭವಿಸಿ ಕವನ ರಚಿಸಬೇಕು ಪ್ರಶಸ್ತಿಯ ಗೀಳಿಗೆ ಬೀಳಬಾರದು ಇದರ ಜೊತೆಗೆ ನಿರಂತರ ಅಧ್ಯಯನ ಮಾಡಿದರೆ ಉತ್ತಮ ಸಾಹಿತ್ಯ ರೂಪಗೊಳ್ಳಲು ಸಾಧ್ಯವಿದೆ ಎಂದರು. ಕವಿಯ ಬರವಣೆಗೆಯು ಸಮಾಜದ ವಾಸ್ತವಿಕ ಚಿತ್ರಣ ನೀಡುವುದರ ಮೂಲಕ ಸಮಾಜವನ್ನು ಸುಧಾರಿಸುವಂತಿರಬೇಕೆಂದು ಹೇಳುತ್ತಾ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಕಟ್ಟುವಂತಹ ಭಾವಿ ಶಿಕ್ಷಕರಾಗಿರೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮ

ದಲ್ಲಿ ಮುಖ್ಯ ಅತಿಥಿಸ್ಥಾನವಹಿಸಿ ಮಾತನಾಡಿದ ಸಂಸ್ಥೆಯ ಉಪನ್ಯಾಸಕ ಶ್ರೀ ಗಂಗಾಧರ ಸೊಪ್ಪಿಮಠ ಮಾತನಾಡಿ ವಿದ್ಯಾರ್ಥಿಗಳು  ಭಾಷಾ ಪ್ರೇಮ ಹಾಗೂ ವೃತ್ತಿ ಪ್ರೇಮವನ್ನು ಹೊಂದಿ ಭಾಷಾ ಸಂಘಗಳ ಮೂಲಕ ಸಂಘಟನಾತ್ಮಕ ಚಟುವಟಿಕೆಗಳನ್ನು ಕೈಗೊಂಡು ಮಕ್ಕಳಲ್ಲಿ ಸೃಜನಾತ್ಮಾಕ ಸಾಮರ್ಥ್ಯವನ್ನು ಬೆಳೆಸುವಂತಹ ಭಾಷಾ ಶಿಕ್ಷಕರಾಗಿರೆಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವಹಿಸಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರಿ ಪ್ರಕಾಶ ಕೆ ಬಡಿಗೇರ ಮಾತನಾಡಿ  ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಜವಬ್ದಾರಿ ನಮ್ಮಲ್ಲೆರ ಮೇಲೆ ಇದೆ ಅದಕ್ಕಾಗಿ ನಾವೇಲ್ಲಾ ಪ್ರಯತ್ನಿಸೋಣ ಎಂದರು ಸಮಾರಂಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ಎಸ್.ಎಸ್.ವೀರನಗೌಡ್ರ. ಎ.ಎನ್.ತಳಕಲ್.ಶೈಲಜಾ ಅರಳಲೇಮಠ. ಎಲ್.ಎಸ್.ಹೊಸಮನಿ.ವಿ.ಆರ್.ಪಾಟೀಲ್.ಜೆ.ಎಸ್.ಹಿರೇಮಠ.ಡಿ.ಎಂ.ಬಡಿಗೇರ.ಎಮ್.ವಿ.ಕಾತರಕಿ ಡಿ.ಹೊಸಮನಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟನಾ ಸಂಚಾಲಕರಾದ ಶ್ರೀ ಆನಂದರಾವ್ ದೇಸಾಯಿ ಪ್ರಸ್ತಾವಿಕವಾಗಿ ಮಾತನಾಡಿದರು.ನೇತ್ರಾವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಅನಿಲ ಸ್ವಾಗತಿಸಿದರು.ದೇವಪ್ಪ ವಂದಿಸಿದರು.ಕಾಮಾಕ್ಷಿ ನಿರೂಪಿಸಿದರು.

Please follow and like us:
error