You are here
Home > Koppal News > ಗವಿಸಿದ್ಧ ಎನ್. ಬಳ್ಳಾರಿಯವರ ಸಂಸ್ಮರಣಾ ಗ್ರಂಥಕ್ಕೆ ಅನುಮತಿ ಕೊಟ್ಟಿಲ್ಲ – ಡಾ. ಪ್ರಕಾಶ ಬಳ್ಳಾರಿ

ಗವಿಸಿದ್ಧ ಎನ್. ಬಳ್ಳಾರಿಯವರ ಸಂಸ್ಮರಣಾ ಗ್ರಂಥಕ್ಕೆ ಅನುಮತಿ ಕೊಟ್ಟಿಲ್ಲ – ಡಾ. ಪ್ರಕಾಶ ಬಳ್ಳಾರಿ

 ಇತ್ತೀಚಿಗೆ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿಯವರು ನಾಡಕವಿ ಗವಿಸಿದ್ಧ ಎನ್. ಬಳ್ಳಾರಿಯವರ ಸಂಸ್ಮರಣಾ ಗ್ರಂಥ ಮಾಡುವದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಗವಿಸಿದ್ಧ ಎನ್. ಬಳ್ಳಾರಿ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ನಮ್ಮ ತಂದೆಯವರಾದ ನಾಡಕವಿ ಖ್ಯಾತಿಯ ಗವಿಸಿದ್ಧ ಎನ್. ಬಳ್ಳಾರಿಯವರ ಕುರಿತಾದ ಬದುಕು-ಬರಹದ ಸಂಕಲನಕ್ಕಾಗಲಿ, ಅಭಿನಂದನಾ ಗ್ರಂಥಕ್ಕಾಗಲಿ ಅಥವಾ ಸಾಹಿತ್ಯದ ಯಾವುದೇ ಪ್ರಕಾರಕ್ಕಾಗಲೀ ಯಾವುದೇ ವ್ಯಕ್ತಿಗೂ, ಪ್ರಕಾಶನಕ್ಕೂ ಪರವಾನಿಗೆ, ಅನುಮತಿಯನ್ನು ನಮ್ಮ ಕುಟುಂಬ ವರ್ಗದವರು ನೀಡಿಲ್ಲ. ಸೂಕ್ತ ಸಮಯ ಮತ್ತು ಸಂದರ್ಭದಲ್ಲಿ  ನಮ್ಮ ತಂದೆ ಗವಿಸಿದ್ಧ ಎನ್. ಬಳ್ಳಾರಿಯವರ ಬದುಕು-ಬರಹ, ಸಂಕಲಿತ ಲೇಖನಗಳ ಪುಸ್ತಕಗಳನ್ನು ನಮ್ಮದೇ ಪ್ರಕಾಶನ ಮತ್ತು ವೇದಿಕೆಯ ಅಡಿಯಲ್ಲಿ ಪ್ರಕಟಿಸಲಾಗುವುದು ಎಂದು ಅವರ ಮಗ ಉಪನ್ಯಾಸಕ ಡಾ. ಪ್ರಕಾಶ ಬಳ್ಳಾರಿ   ತಿಳಿಸಿದ್ದಾರೆ.

Leave a Reply

Top