ಪುಸ್ತಕಗಳು ನನ್ನ ಸ್ನೇಹಿತರು ಭಾಗ -೨ ಆಂದೋಲನಕ್ಕೆ ಚಾಲನೆ.

ಗಂಗಾವತಿ -04-
ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಯೋಜನೆಯ ಪ್ರಧಾನ ಸಂಯೋಜಕರಾದ ಪ್ರಕಾಶ ಕಡಗದರವರು ಮಾಥನಾಡಿ ಪುಸ್ತಕಗಳು ನನ್ನ ಸ್ನೇಹಿತರು ಎಂಬ ಆಂದೋಲನವು ಚೈಲ್ಡ್ ಫಂಡ್ ಇಂಡಿಯಾ ಯೋಜಿಸಿದ ೨೦೧೪ ರಿಂದ ಪ್ರಾರಂಭವಾಗಿ ದೇಶದ ೧೪ ರಾಜ್ಯಗಳಲ್ಲಿ ಹಾಗೂ  ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ೪೦.೦೦೦ ಮಕ್ಕಳಿಗೆ ಪುಸ್ತಕಗಳು ನನ್ನ ಸ್ನೇಹಿತರು ಎಂಬ ಕಾರ್ಯಕ್ರಮದ ಅಡಿಯಲ್ಲಿ ಪುಸ್ತಕಗಳ ಕಿಟ್‌ಗಳನ್ನು ವಿತರಿಸಿದ್ದು ಇದರಿಂದಾಗಿ ಸಮುದಾಯದ ಒಟ್ಟು ೧,೧೫,೦೦೦ ಮಕ್ಕಳಿಗೆ ಇದರಿಂದ ಕಲಿಕೆಗೆ ಅನುಕೂಲವಾಗಿದೆಯೆಂದು ತಿಳಿಸಿದರು. ಎರಡನೇ ಹಂತದ ಕಾರ್ಯಕ್ರಮವಾಗಿ ಮಕ್ಕಳಿಗೆ ಸೋಲಾರ್ ಲ್ಯಾಟಿನ್‌ಗಳನ್ನು ವಿತರಿಸುವ ಕಾರ್ಯ ಚೈಲ್ಡ್ ಫಂಡ್ ಇಂಡಿಯಾ ಯೋಜಿಸಿದೆ ಎಂದು ತಿಳಿಸುತ್ತಾ ಮಕ್ಕಳು ಲ್ಯಾಟಿನ್‌ಗಳನ್ನು ಉಪಯೋಗಿಸುವ ಮಾದರಿಯ ವೀಡಿಯೋಗಳನ್ನು ತೋರಿಸಿದರು.
    ಪ್ರಸ್ತುತ ಸನ್ನಿವೇಶದಲ್ಲಿ  ಮಕ್ಕಳಿಗೆ ರಾತ್ರಿಯ ಸಮಯದಲ್ಲಿ ಓದಲಿಕ್ಕೆ ಅನುಕೂಲವಾಗಲೆಂದು ವಿಮೋಚನಾ ಸಂಸ್ಥೆ ಚೈಲ್ಡ್ ಫಂಡ್ ಇಂಡಿಯಾದ ನೆರವಿನೊಂದಿಗೆ ಸೋಲಾರ್ ಲ್ಯಾಟಿನ್ (ದೀಪ)ಗಳನ್ನು ವಿತರಿಸುವಂತಹ ಈ ಮೊದಲು  ಸಂಸ್ಥೆಯ ಮಕ್ಕಳಲ್ಲಿ ಓದುವ ಕೌಶಲ್ಯವನ್ನು ಬೆಳೆಸುವ ಉದ್ದೇಶದಿ
ಂದ ಪುಸ್ತಕಗಳು ನನ್ನ ಸ್ನೇಹಿತರು ಎಂಬ ಕಾರ್ಯಕ್ರಮದ ಅಡಿಯಲ್ಲಿ ಪುಸ್ತಕದ ಕಿಟ್‌ಗಳನ್ನು ವಿತರಿಸಿ ಪ್ರಸ್ತುತ ಅದರ ಮುಂದುವರೆದ ಭಾಗವಾಗಿ ಇಂದು ಪುಸ್ತಕದ ಕಿಟ್‌ಗಳನ್ನು ಪಡೆದ ಮಕ್ಕಳಿಗೆ  ಸೋಲಾರ್ ಲ್ಯಾಟಿನ್ (ದೀಪ) ಗಳನ್ನು ವಿತರಿಸುವ ಮೂಲಕ ಪ್ರಸ್ತುತ ಸನ್ನಿವೇಶದಲ್ಲಿ  ಮಕ್ಕಳಿಗೆ ಓದುವ ಕಾರ್ಯದಲ್ಲಿ ನೆರವಾಗುತ್ತಿದೆ. ವಿಧ್ಯಾರ್ಥಿಗಳು ಇವುಗಳನ್ನು  ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು  ಉತ್ತಮ ಸಾಧನೆ ಮಾಡಿದರೆ ಸಂಸ್ಥೆಯ ಶ್ರಮ ಸಾರ್ಥಕವಾಗಲಿದೆ ಎಂದರು. ೬ ರಿಂದ ೧೪ ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಯಾದರು ಅನೇಕ ಮಕ್ಕಳು ಹಲವಾರು ಕಾರಣದಿಂದ ಶಾಲೆಯಿಂದ ಹೊರಗುಳಿದಿದ್ದಾರೆ, ಅಂತಹ ಮಕ್ಕಳನ್ನು ಪುನ: ಶೈಕ್ಷಣಿಕ ವಾಹಿನಿಗೆ ಕರೆತರುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗೆಯೇ ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಕಾರ್ಯ ನಿರ್ವಹಿಸುವುದು ಸಂಸ್ಥೆಯ ಆಶಯವಾಗಿದೆ. 
ಈ ಭಾಗದ ಮಕ್ಕಳಾದ ನೀವು ತುಂಬಾ ಅದೃಷ್ಟವಂತರು ಏಕೆಂದರೆ ಮಕ್ಕಳನ್ನು ಮೂರು ವಯೋಮಾನದಲ್ಲಿ ವಿಂಗಡಿಸಿ ೦-೫ ವರ್ಷದ ಮಕ್ಕಳಿಗಾಗಿ ಆರೋಗ್ಯಕ್ಕೆ ಸಂಭಂದಿಸಿದ ಕಾರ್ಯಕ್ರಮಗಳು, ೬-೧೪ ವರ್ಷದ ಮಕ್ಕಳಿಗಾಗಿ ಕಡ್ಡಾಯ ಹಾಗೂ ಗುಣಮಟ್ಟದ ಶಿಕ್ಷಣ ಕಾರ್ಯಕ್ರಮಗಳು ಹಾಗೂ ೧೫-೨೪ ವರ್ಷದ ಮಕ್ಕಳಿಗಾಗಿ ಉನ್ನತ ಶಿಕ್ಷಣ, ನೈತಿಕ ಶಿಕ್ಷಣದ ಜೊತೆ ವೃತ್ತಿಪರ ತರಭೇತಿಗಳನ್ನು ಹಮ್ಮಿಕೊಳ್ಳುವ ಮೂಲಕ ವಿಮೋಚನಾ ಸಂಸ್ಥೆ ಮಕ್ಕಳನ್ನು ಉತ್ತಮ ಹಾಗೂ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಕಾರ್ಯವನ್ನು  ಮಾಡುತ್ತಿದೆ ಎಂದು ತಿಳಿಸಿದರು.
    ಯಾರಾದರೂ  ೬-೧೪ ವರ್ಷದ ಮಕ್ಕಳನ್ನು ದುಡಿಮೆಯ ಉದ್ದೇಶದಿಂದ ಕೆಲಸಕ್ಕೆ ಹಚ್ಚಿದ್ದರೆ ಅಥವಾ ಕೆಲಸಕ್ಕೆ ಇಟ್ಟುಕೊಂಡರೆ ಜೈಲು ಶಿಕ್ಷೆ ಜೊತೆಗೆ ದಂಡವನ್ನು ವಿಧಿಸಲಾಗುವುದು ಎಂದು ಪಾಲಕರಿಗೆ ಕಾನೂನಾತ್ಮಕ ತಿಳುವಳಿಕೆಯನ್ನು ನೀಡಿದರು.
ಯೋಜನೆಯ ಸಮುದಾಯ ಸಂಘಟಕರಾದ ಹನುಮಂತಪ್ಪ ವಿಠಲಾಪುರ, ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ರಾವಲಿಂಗಪ್ಪ ಗಲಾಟಿ ಮತ್ತು ರಾಮಣ್ಣ ಹಡಪದ ಶಿಕ್ಷಣ ಪ್ರೇಮಿಯಾದ ನಾಗರಾಜ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗವಿಸಿದ್ದಪ್ಪ, ಶಿಕ್ಷಕ ಗಿರಿಶ ರಾಠೋಡ, ನವಾಜ್ ಸಂಸ್ಥೆಯ ಸಂಘಟಕರಾದ ಫಕೀರಪ್ಪ, ವಿರುಪಮ್ಮ, ಗ್ರಾಮದ ಮಕ್ಕಳು ಮತ್ತು ಮಕ್ಕಳ ಪಾಲಕರು ಭಾಗವಹಿಸಿದ್ದರು.

ವಿಮೋಚನಾ ಮಕ್ಕಳ ಅಭಿವೃದ್ದಿ ಯೋಜನೆಯು ಸಹಯೋಗ ಚೈಲ್ಡ್ ಫಂಡ್ ಇಂಡಿಯಾದ ನೆರವಿನೊಂದಿಗೆ ಗಂಗಾವತಿ ತಾಲೂಕಿನ ಉಡಮಕಲ್ ಮತ್ತು ವಿಠಲಾಪುರ ಗ್ರಾಮದಲ್ಲಿ ಯೋಜನೆಯ ಫಲಾನುಭವಿ ಕುಟುಂಬದ ೬ ರಿಂದ ೧೪ ವರ್ಷದ ಮಕ್ಕಳಲ್ಲಿ ಓದುವ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಈ ವಯೋಮಾನದ  ಮಕ್ಕಳಿಗೆ  ಸೋಲಾರ್ ಲ್ಯಾಟಿನ್ (ದೀಪ)ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Please follow and like us:
error