ಬಹುಮುಖ ಪ್ರತಿಭೆಯ ಸೃಜನಶೀಲ ಶಿಕ್ಷಕ ಗವಿಸಿದ್ದಪ್ಪ ಕೊನಸಾಗರ.

ಕೊಪ್ಪಳ-13-  ಪ್ರಾಥಮಿಕ ಶಾಲೆಗಳು ಅವ್ಯವಸ್ಥೆಯ ಆಗರ ಎಂಬ ಸಂಕುಚಿತ ಭಾವನೆ ಹೊಂದಿದವರು ಹಲವಾರು ಜನರಿದ್ದಾರೆ. ಅಂತವರ ಭಾವನೆಗಳಗೆ ವ್ಯತಿರಿಕ್ತವಾಗಿ ಗ್ರಾಮೀಣ ಪ್ರದೇಶ ಮಕ್ಕಳಿಗೆ ಸರ್ವವಿದದಲ್ಲೂ ಶಿಕ್ಷಣದ ದಾಹವನ್ನು ಇಡೇರಿಸುವ ಅವರ ಶ್ರೇಯೋಭಿವೃದ್ಧಿಗೆ ಎಲ್ಲಾ ಶಿಕ್ಷಕರು ಕೂಡಾ ಇದ್ದಾರೆ. ಅಂತಹ ಶಿಕ್ಷಕರಲ್ಲಿ ಕೊಪ್ಪಳ ತಾಲೂಕಿನ ಹಾಲಹಳ್ಳಿ ಶಾಲೆಯ ಶ್ರೀ ಗವಿಸಿದ್ದಪ್ಪ ತಂದೆ ಚನ್ನಪ್ಪ ಕೊನಸಾಗರ ಶಿಕ್ಷಕರು ಒಬ್ಬರು. ವೃತ್ತಿಯಿಂದ ದೈಹಿಕ ಶಿಕ್ಷಕರಾದರು. ಪ್ರವೃತ್ತಿಯಿಂದ ನಾಟಕ ಅಭಿನಯ, ಜಾನಪದ ಕಲೆ ಮತ್ತು ಮಕ್ಕಳ ಭಾವೈಕ್ಯತೇ ಗೋಷ್ಠಿಗಳಲ್ಲಿ ಹವ್ಯಾಸವನ್ನು ಮೂಡಿಸಿಕೊಂಡಿದ್ದಾರೆ. ಮಕ್ಕಳಿಗೆ ಕ್ರೀಡೆ ಹಾಗೂ ರಂಗ ಶಿಕ್ಷಣದ ಮೂಲಕ ಪಾಠ ಮನವರಿಕೆ ಯಾಗುವಂತೆ ಶ್ರಮವಹಿಸುತ್ತಿದ್ದಾರೆ. ಹಾಗೂ ಸಾಮಾಜಿಕ ರಂಗದಲ್ಲಿ ಅಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಹಾಗೂ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ.
    ಇವರು ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ದಿನಾಂಕ: ೦೧-೦೬-೧೯೭೬ ರಂದು ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಿಸರಹಳ್ಳಿ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಅವರು ಪಿಯುಸಿ, ಸಿಪಿಎಡ್ ಮತ್ತು ಬಿ.ಎ. ಅಭ್ಯಾಸ ಮುಗಿಸಿದರು. ನಂತರ ೩-೦೧-೨೦೦೦ ರಲ್ಲಿ ಸಮೀಪದ ಕಲ್‌ತಾವರಗೇರಾ ಶಾಲೆಯಲ್ಲಿ ಸೇವೆಗೆ ಸೇರಿದರು. ಪ್ರಸ್ತುತ ಅವರು ಹಾಲಹಳ್ಳಿಯ ಸ.ಹಿ.ಪ್ರಾ. ಶಾಲೆಯ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ೨೦೦೭-೦೮ ರಲ್ಲಿ ೨೦೧೦-೧೧ ಹಾಗೂ ೨೦೧೨-೧೩ ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಮತ್ತು ಭಾರತ ಸೇವಾದಳ ಕೊಪ್ಪಳ ಇವರ ಆಶ್ರಯದಲ್ಲಿ  ಜರುಗಿದ  ಕೊಪ್ಪಳ ತಾಲೂಕಾ, ಜಿಲ್ಲಾ ಮತ್ತು ರಾಷ್ಟ್ರಮಟ್ಟದ ಭಾವೈಕ್ಯತಾ ಮೇಳಾ, ಯಲಬುರ್ಗಾ, ಮಂಗಳೂರು, ಮುಂಡರಗಿಯಲ್ಲಿ ಭಾಗವಿಸಿದ್ದಾರೆ.
    ಜಾನಪದ ಕಲೆಯಲ್ಲಿ ೨೦೦೫-೦೬ ರಲ್ಲಿ ಜರುಗಿದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಜರುಗಿದ ಜನಪದ ಮೇಳದಲ್ಲಿ ಭಾಗವಿಸಿದ್ದಾರೆ. ೨೦೦೭-೦೮ ರಲ್ಲಿ ಹಾಗೂ ೨೦೧೩-೧೪ ರಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲಾ ಮಟ್ಟದ ಶಿಕ್ಷಕರ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಜಿಲ್ಲಾ ಉತ್ಸವ ಹಾಗೂ ಇಟಗಿ ಉತ್ಸವ ಇನ್ನಿತರ ಕಾರ್ಯಕ್ರಮಗ
    ಪೌರಾಣಿಕ ನಾಟಕಗಳಾದ `ರಕ್ತರಾತ್ರಿ’,  `ಗಿರಿಜಾ ಕಲ್ಯಾಣ’ ಐತಿಹಾಸಿಕ ನಾಟಕಗಳಾದ `ಗಂಡುಗಲಿ ಕುಮಾರರಾಮ’ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ’ ಮತ್ತು `ಮೈಸೂರು ಹುಲಿ ಟಿಪ್ಪುಸುಲ್ತಾನ’ ಎಂಬ ನಾಟಕಗಳಲ್ಲಿ ಅಭಿನಯಿಸಿ ಜನಮನ್ನಣೆಗಳಿಸಿದ್ದಾರೆ. ತಾಲೂಕ, ಜಿಲ್ಲಾ ಹಾಗೂ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಕವನ ವಾಚಿಸಿದ್ದಾರೆ.
ಇವರಿಗೆ ಸಂದ ಪ್ರಶಸ್ತಿಗಳು :- ಚುಟುಕು ಕವಿ ಶ್ರೇಷ್ಠ ಪ್ರಶಸ್ತಿ, ಜನಪ್ರೀಯ ಶಿಕ್ಷಕ ರಾಜ್ಯ ಪ್ರಶಸ್ತಿ, ನವೋದಯ ಸಂಘಟನಾ ಶಿಕ್ಷಕ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಜೈನ್ ಯುನಿರ್ವಸಿಟಿ ಬೆಂಗಳೂರು ಮತ್ತು ಡೆಕ್ಕನ್ ಹೆರಾಲ್ಡಾ, ಪ್ರಜಾವಾಣಿ ದಿನಪತ್ರಿಕೆ ಬೆಂಗಳೂರು ಇವರ ಆಶ್ರಯದಲ್ಲಿ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ೨೦೧೫ ರಂದು ಸಾಹಿತ್ಯ ಭವನ ಕೊಪ್ಪಳದಲ್ಲಿ ಬುದ್ಧ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಹಾಗೂ ಶ್ರೀ ಡಾ. ಪುಟ್ಟರಾಜ ಕವಿಗವಾಯಿಗಳು ಪ್ರಶಸ್ತಿ ಸಂದಿದೆ. ಅಲ್ಲದೇ ಹಲವಾರು ಸಂಘ-ಸಂಸ್ಥೆಗಳು ಇವರ ಅಪಾರ ಸೇವೆ ಕಾರ್ಯತತ್ಪರತೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ.

ಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದಿದ್ದಾರೆ.

Please follow and like us:
error