fbpx

ಸಹಕಾರಿ ಸಂಘಗಳ ಧುರೀಣ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ.

ಸಹಕಾರ ಸಂಘಗಳ ಧುರೀಣ, ಹಿರಿಯ ರಾಜಕೀಯ ಮುತ್ಸದ್ಧಿ ಮಾಜಿ ಸಚಿವ ಬೀದರ್ ಉತ್ತರ ಕ್ಷೇತ್ರದ
ಕೆಜೆಪಿ ಶಾಸಕ ಡಾ. ಗುರುಪಾದಪ್ಪ ನಾಗಮಾರಪಲ್ಲಿ(74) ವಿಧಿವಶರಾಗಿದ್ದಾರೆ. ಬೆಂಗಳೂರಿನ
ವಿಕ್ರಮ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ 5 ಗಂಟೆಗೆ ಅವರು ನಿಧನರಾದರು. ಔರಾದ್‍ನ
ನಾಗಮಾರಪಲ್ಲಿಯಲ್ಲಿ ಜನಿಸಿದ ಇವರ ತಂದೆಯ ಹೆಸರು ಸಂಗನಬಸಪ್ಪ ನಾಗಮಾರಪಲ್ಲಿ. 1985ರಿಂದ
2007ರವರೆಗೆ ಬೀದರ್ ಜಿಲ್ಲೆಯ ಔರಾದ್ ಮತಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು.
1989ರಲ್ಲಿ ಗೃಹ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1996-1998ರ ಅಲ್ಲಿ
ಸಂಪುಟ ದರ್ಜೆಯ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2005-2006ರ ಅವಧಿಯಲ್ಲಿ
ಸಂಪುಟ ದರ್ಜೆಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ
ಕಾರ್ಯನಿರ್ವಹಿಸಿದ್ದರು.
ಇವರ ಸಹಕಾರ ಕ್ಷೇತ್ರದಲ್ಲಿ ಮಾಡಿದ ಸಾಧನೆಯೇ ದೊಡ್ಡದು.
1987ರಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸ್ವ-ಸಹಾಯ
ಗುಂಪುಗಳನ್ನು ರಚಿಸಲಾಯಿತು. ಇದರಡಿಯಲ್ಲಿ ಇಲ್ಲಿಯವರೆಗೆ ಸುಮಾರು ಸುಮಾರು 2ಲಕ್ಷ
12ಸಾವಿರ ಸಂಖ್ಯೆಯ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಯಾವುದೇ ಭದ್ರತೆಯನ್ನು
ಪಡೆದುಕೊಳ್ಳದೇ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಈ ಕುಟುಂಬಗಳ ಆರ್ಥಿಕ, ಸಾಮಾಜಿಕ ಹಾಗೂ
ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗಿದ್ದರು.
ದೇಶದಲ್ಲಿಯೇ ಪ್ರಥಮ ಬಾರಿಗೆ
ಬೀದರ್‍ನಲ್ಲಿ ಸುಸಜ್ಜಿತವಾದ ಮತ್ತು ಹೈಟೆಕ್ ತಂತ್ರಜ್ಞಾನವನ್ನು ಒಳಗೊಂಡ ಒಂದು ಸಹಕಾರ
ತರಬೇತಿ ಕೇಂದ್ರವನ್ನು (ಸೌಹಾರ್ದ) ಬೀದರ್‍ನಲ್ಲಿ ಸ್ಥಾಪಿಸಿದ್ದಾರೆ. ಈ ತರಬೇತಿ
ಕೇಂದ್ರದಲ್ಲಿ ಸಹಕಾರಿ ರಂಗದ ವಿವಿಧ ವಿಷಯಗಳ ಬಗ್ಗೆ ಮತ್ತು ಸ್ವ-ಸಹಾಯ ಗುಂಪುಗಳ
ಪರಿಕಲ್ಪನೆಯ ಬಗ್ಗೆ ನೂರಾರು ತರಬೇತಿ ಶಿಬಿರ, ಕ್ಷೇತ್ರದರ್ಶನ ಕಾರ್ಯಕ್ರಮಗಳನ್ನು
ನಡೆಸಲಾಗುತ್ತಿದೆ. ಇಲ್ಲಿಯವರೆಗೆ ದೇಶಾದ್ಯಂತ ಹಾಗೂ ಹಲವಾರು ವಿದೇಶಿ ಸಂಘ ಸಂಸ್ಥೆಗಳ
ಸದಸ್ಯರು/ಬ್ಯಾಂಕುಗಳ ಮುಖ್ಯಸ್ಥರು ಈ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿಯನ್ನು
ಪಡೆದುಕೊಳ್ಳುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು
ಸಾಂಸ್ಕೃತಿಕ ಸಂಘ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ವಧಿಯ

Please follow and like us:
error

Leave a Reply

error: Content is protected !!