ಶ್ರೀ ಗವಿಸಿದ್ಧೇಶ್ವರ ಗೆಳೆಯರ ಬಳಗದಿಂದ ೨೨೫ ಕ್ವಿಂಟಲ್ ಮಾದಲಿ.

ಕೊಪ್ಪಳ-06- ಪ್ರತಿ ವರ್ಷದಂತೆ ಈ ವರ್ಷವು ಸಹ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀ ಗವಿಸಿದ್ಧೇಶ್ವರ ಗೆಳೆಯರ ಬಳಗದಿಂದ ೨೨೫ ಕ್ವಿಂಟಲ್ ಮಾದಲಿಯನ್ನು ಅರ್ಪಿಸಲು  ತಿರ್ಮಾನಿಸಲಾಗಿದೆ.
ಬೆಲ್ಲ             ೧೨೧ ಕ್ವಿಂಟಲ್
ಗೋದಿ         ೮೦ ಕ್ವಿಂಟಲ್
ಹುರಿದ ಗೋದಿಹಿಟ್ಟು    ೧೫ ಕ್ವಿಂಟಲ್
ಕಡಲಿಬೆಳೆ        ೪ ಕ್ವಿಂಟಲ್
ಪುಟಾಣಿ        ೨೦೦ ಕೆ.ಜಿ
ಒಣಕೊಬರಿ        ೨೦೦ ಕೆ.ಜಿ
ಕಸಕಸಿ            ೪೦ ಕೆ.ಜಿ
ಶುಂಠಿ            ೪೦ ಕೆ.ಜಿ
ಯಾಲಕ್ಕಿ        ೨೦ ಕೆ.ಜಿ

ಈ ಎಲ್ಲ ಮೇಲಿನ ವಸ್ತುಗಳನ್ನು ಬಳಸಿ ‘ಮಾದಲಿ’ ತಯಾರಿಸುವ ಈ ಕಾರ್ಯದಲ್ಲಿ ಕೊಪ್ಪಳದ ಸುತ್ತಮುತ್ತಲಿನ ಸುಮಾರು ೩೦-೪೦ ಹಳ್ಳಿಗಳ ಭಕ್ತರು ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸೇವಾ ಕಾರ್ಯದ ಕುರಿತು ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಅರ್ಪಿಸುವ ಬಗ್ಗೆ ನಗರದ ಬಸವರಾಜ ಪುರದರ ಪ್ಲಾಂಟ್‌ನಲ್ಲಿ ಸೇರಿದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಸತತ ೬ನೇ ವರ್ಷದಿಂದ ಮಾದಲಿ ಸೇವೆ ಮಾಡುತ್ತ ಬಂದಿರುವ ಗೆಳೆಯರ ಬಳಗವು ಮೊದಲು ವರ್ಷ ಅಂದರೆ ೨೦೧೧ರಲ್ಲಿ ೫೧ ಕ್ವಿಂಟಲ್‌ನಿಂದ ಪ್ರಾರಂಭವಾದ ಈ ಮಾದಲಿ ಸೇವೆಯು ಈ ವರ್ಷವು ೨೦೧೬ರ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ೨೨೫ ಕ್ವಿಂಟಲ್ ಮಾದಲಿ ಅರ್ಪಿಸಲಾಗುವುದು ಎಂದು ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ಗೆಳೆಯರ ಬಳಗದ ಸದಸ್ಯರಾದ ಚಂದ್ರಶೇಖರ ಕವಲೂರ, ಬಸವರಾಜ ರಾಜೂರ, ರೇಣುಕಾರಾಧ್ಯ ಕೆ.ಕೆ, ರಾಜು ಶೆಟ್ಟರ, ಚಂದ್ರಯ್ಯ ಮಹಾಂತಯ್ಯನಮಠ, ಶರಣಬಸಪ್ಪ, ಸಂಜಯ ಕೊತಬಾಳ, ಸುರೇಶ ಓಜಿನಳ್ಳಿ, ಅಮರಯ್ಯ ಹಿರೇಮಠ, ಗವಿಸಿದ್ದಪ್ಪ ತಳಕಲ್, ಪತ್ರೆಪ್ಪ ಪಲ್ಲೆದ, ಶೇಖರಪ್ಪ ಕವಲೂರ, ಮಹೇಂದ್ರ ಚೋಪ್ರಾ ಮತ್ತು ಇತರ ಸರ್ವಸದಸ್ಯರು ಪಾಲ್ಗೊಂಡಿದ್ದರು. ಎಂದು ಶ್ರೀ ಗವಿಸಿದ್ಧೇಶ್ವರ ಗೆಳೆಯರ ಬಳಗದ ಬಸವರಾಜ ಪುರದ ತಿಳಿಸಿದ್ದಾರೆ.

Please follow and like us:
error