ಪ್ರಗತಿ ಮಹಿಳಾ ಮಂಡಳದಿಂದ ಪಾರಿತೋಷಕ ವಿತರಣೆ

ಮಕ್ಕಳ ದಿನಾಚರಣೆ ಅಂಗವಾಗಿ ದಿನಾಂಕ ೧೫-೧೧-೨೦೧೪ ರಂದು ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಗತಿ ಮಹಿಳಾ ಮಂಡಳವತಿಯಿಂದ ಪಾರಿತೋಷಕಗಳನ್ನು  ವಿತರಿಸಲಾಯಿತು.

ಪ್ರಗತಿ ಮಹಿಳಾ ಮಂಡಳ ಕೊಪ್ಪಳ ಹಾಗೂ ಮಾಸ್ತಿ ಪಬ್ಲಿಕ್ ಸ್ಕೂಲ್ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಸಮಾರಂಭವನ್ನು ಏರ್ಪಡಿಸಲಾಯಿತು. ಮುಖ್ಯಅತಿಥಿಗಳಾಗಿ ಕೊಪ್ಪಳ ನಗರ ಸಭೆಯ ಉಪಾಧ್ಯಕ್ಷ ಅಮ್ಜದ್ ಪಾಟೀಲ್ ಆಗಮಿಸಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ಹುಲಗಪ್ಪ ಕಟ್ಟಿಮನಿ ವಹಿಸಿದ್ದರು. ಶಾಲೆಯ ಮಕ್ಕಳಿಗಾಗಿ ವಿವಿದ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಹಾತ್ಮ ಗಾಂಧಿ, ವನಿಕೆ ಒಬವ್ವ, ಅಂಬೇಡ್ಕರ್, ರಾಧಾಕೃಷ್ಣಾ, ರಾಮ ಲಕ್ಷ್ಮಣ, ಸೀತಾ ಹನುಮಾನ್, ಇತ್ತಿತರ ವೇಷ ಬೂಷಣ ಪ್ರೇಕ್ಷಕರ ಗಮನ ಸೆಳೆಯಿತು. ಸ್ಪರ್ದೆಯಲ್ಲಿ ವಿಜೇತರಾದ ಶಾಲೆಯ ಮಕ್ಕಳಿಗೆ ಪ್ರಗತಿ ಮಹಿಳಾ ಮಂಡಳದ ಪರವಾಗಿ ಗೌರವ ಅಧ್ಯಕ್ಷರಾದ ಸುಜಾತ ಮಾಲಿಪಾಟೀಲ್ ಹಾಗೂ ಅಧ್ಯಕ್ಷರಾದ ಶ್ರೀಮತಿ ನೀಲಂ ಪಾಟೀಲ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ ಅಗಡಿ, ಇವರು ಸಮಾgಂಭದಲ್ಲಿ ಪಾರಿತೋಷಕಗಳನ್ನು ವಿತರಿಸಿದರು. 
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರು, ಸಿಬ್ಬಂದಿ ವರ್ಗ, ಶಾಲೆಯ ಎಲ್ಲಾ ಮಕ್ಕಳು ಪಾಲಕ ಪ್ರತಿನಿಧಿಗಳು ಉಪಸ್ಥಿತರಿದ್ದರು. 

Leave a Reply