ಸದಸ್ಯರ ಆರೋಪದಲ್ಲಿ ಹುರುಳಿಲ್ಲ-ಅಮ್ಜದ್ ಪಟೇಲ್

 ಕೊಪ್ಪಳ. ರಾಜೀವ್ ಆವಾಸ್ ಯೋಜನೆಯಲ್ಲಿ ಉಪಾಧ್ಯಕ್ಷರು ಹಸ್ತಕ್ಷೇಪ ಮಾಡಿ ಎಲ್ಲ ನಿವೇಶನಗಳನ್ನು ತಮ್ಮ ವಾರ್ಡಿಗೆ ಹಾಕಿಸಿಕೊಂಡಿದ್ದಾರೆ ಎಂದು ಕೆಲ ಸದಸ್ಯರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಗರಸಭೆ ಉಪಾದ್ಯಕ್ಷ ಅಮ್ಜದ್ ಪಟೇಲ್ ಹೇಳಿದ್ದಾರೆ.
ಅವರು ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣಾ ಹೇಳಿಕೆ ನೀಡಿ, ರಾಜೀವ್ ಆವಾಸ್ ಯೋಜನೆ ಕೇಂದ್ರ ಸರಕಾರದ್ದೆ ಹೊರತು, ನಗರಸಭೆಯದ್ದಲ್ಲ. ತಮ್ಮ ಸದಸ್ಯರಿಗೆ ಮಾಹಿತಿ ಕೊರತೆ ಇರುವ ಹಾಗಿದೆ. ಕೇಂದ್ರ ಸರಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ಅದು ಕೊಳಚೆ ಮಂಡಳಿ ಆಶಾಕಿರಣ ಎಂಬ ಎನ್‌ಜಿಓ ಮೂಲಕ ಸರ್ವೆ ಮಾಡಿಸಿಯೇ ನಂತರ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ನಂತರ ತಮ್ಮ ವಾರ್ಡಿನ ಅರ್ಹ ಫಲಾನಭವಿಗಳಿಗೆ ರಾಜೀವ್ ಆವಾಸ್ ಯೋಜನೆಯನ್ನು ಕೊಟ್ಟಿದೆ.
ಒಂದು ವೇಳೆ ಈ ಯೋಜನೆ ನಗರಸಭೆ ಅನುದಾನದಿಂದ ರೂಪಿಸಲಾಗಿದ್ದರೆ ಎಲ್ಲ ಸದಸ್ಯರ ಸಲಹೆ ಪಡೆಯಬಹುದಿತ್ತು. ಆದರೆ ಕೇಂದ್ರ ಸರಕಾರದ ಯೋಜನೆಯಲ್ಲಿ ನಗರಸಭೆ ಪಾತ್ರ ಇರೋದಿಲ್ಲ ಎಂಬುದನ್ನು ತಮ್ಮ ಸಹ ಸಹದ್ಯೋಗಿ ಸದಸ್ಯರು ಮೊದಲು ಅರಿತುಕೊಳ್ಳಬೇಕು ಎಂದಿರು ಅವರು, ರಾಜೀವ್ ಆವಾಸ್ ಯೋಜನೆಯಲ್ಲಿ ಕೊಪ್ಪಳ ನಗರಕ್ಕೆ ಒಟ್ಟು ೩೩೭ ರಾಜೀವ್ ವಸತಿ ಭಾಗ್ಯ ಸಿಕ್ಕಿದೆ. ಇದರಿಂದ ಕೊಳಚೆ ಪ್ರದೇಶದ ಫಲಾನುಭವಿಗಳಿಗೆ ತಲೆ ಮೇಲೊಂದು ಸೂರು ದೊರಕಿದಂತಾಗಿದ್ದು, ಎಲ್ಲ ಸದಸ್ಯರು ಕೊಪ್ಪಳ ಜಿಲ್ಲಾ ಕೇಂದ್ರದ ೩೧ವಾರ್ಡುಗಳ ಅಭಿವೃದ್ಧಿಗೆ ಪೂರಕವಾಗಿ ಯೋಚಿಸಬೇಕೆ ಹೊರತು ಬಂದ ಯೋಜನೆಗಳ ಬಗ್ಗೆ ಈ ರೀತಿ ಟೀಕೆ, ಆರೋಪ ಮಾಡಿ ಕಾಲಹರಣ ಮಾಡುವುದು ಒಳಿತಲ್ಲ ಎಂದಿರುವ ಅವರು ತಾವು ನಗರಸಭೆ ಉಪಾಧ್ಯಕ್ಷರಾಗಿರುವುದರಿಂದ ತಾವು ಒಂದೇ ವಾರ್ಡಿಗೆ ಸದಸ್ಯರಾಗಿಲ್ಲ ಎಲ್ಲ ೩೧ವಾರ್ಡಗಳಿಗೂ ಉಪಾಧ್ಯಕ್ಷರಾಗಿರುವುದರಿಂದ ಎಲ್ಲ ವಾರ್ಡಿನ ಅಭಿವೃದ್ಧಿಗೂ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದ್ದಾರೆ. 

Leave a Reply