ಶಾಸಕ ಹಿಟ್ನಾಳರಿಂದ ದರ್ಗಾದ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಕೊಪ್ಪಳ,ಫೆ,೦೧:ನಗರದ ಜವಾಹರ ರಸ್ತೆಯಲ್ಲಿರುವ ಮ್ಯಾನೇಜಮೆಂಟ್ ಕಮೀಟಿ (ಸುನ್ನಿ) ಹಜರತ್ ರಾಜಾಬ್ಹಾಗ್ ಸವಾರ ದರ್ಗಾದ ನೂತನ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭ ಫೆ.೦೧ ರ ಬೆಳಿಗ್ಗೆ ೧೧.೩೦ ಕ್ಕೆ ಜರುಗಿತು. ದಿವ್ಯ ಸಾನಿಧ್ಯವನ್ನು ಅಲ್‌ಹಜ್ ಸೂಫಿ ಮಹ್ಮದ್ ಬಕ್ಷಿಸಾಬ ತಸ್ಕೀನಿ ನಕ್ಷಬಂದಿ ಉಲ್ ಖಾದ್ರಿ ಅವರು ಸಾನಿಧ್ಯ ವವಹಿಸಿದ್ದರು. ತಿಲಾವತ್-ಎ-ಖುರಾನ್ ಕುರಿತು ಕತೀಬ್-ವ-ಇಮಾಮ್ ಮಸಜಿದ್-ಎ-ಯುಸುಫಿಯಾದ ಮುಫ್ತಿ ನಜೀರಅಹ್ಮದ್ ಅವರು ಪ್ರವಚನ ನೀಡಿದರು. 
          ಸಂಕೀರ್ಣದ ಉದ್ಘಾಟನೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನೆರವೇರಿಸಿ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಶಾಸಕರು ಭರವಸೆ ನೀಡಿದರು.  ಅಧ್ಯಕ್ಷತೆಯನ್ನು ರಾಜಾಬ್ಹಾಗಸವಾರ್ ದರ್ಗಾದ ಅಧ್ಯಕ್ಷರಾದ     ಎಂ.ಡಿ.ಜೀಲಾನ್ ಕಿಲ್ಲೇದಾರ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್, ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಹಾಫೀಜ ಮುಸ್ತಫಾ ಕಮಾಲ್, ನಗರಸಭೆ ಹಂಗಾಮಿ ಅಧ್ಯಕ್ಷ ಅಮ್ಜದ್ ಪಟೇಲ್, ನಗರಸಭೆ ಮಾಜಿ ಅಧ್ಯಕ್ಷರಾದ ಲತಾ ವೀರಣ್ಣ ಸಂಡೂರು, ಚಂದ್ರಶೇಖರ ಕವಲೂರು, ನಗರಸಭೆ ಸದಸ್ಯರಾದ ಮೌಲಾಹುಸೇನ ಜಮೇದಾರ, ಖಾಜಾವಲಿ ಬನ್ನಿಕೊಪ್ಪ, ಮುಸ್ಲಿಂ ಸಮಾಜದ ಮುಖಂಡರಾದ ಹನೀಫ್‌ಸಾಬ ಅರಗಂಜಿ, ಭಾಷುಸಾಬ ಕತೀಬ್, ಸಜ್ಜಾದ್‌ಸಾಬ ಕವಲೂರು, ಸಯ್ಯದ್ ಶಬ್ಬೀರ್ ಹುಸೇನಿ, ಖಾಜಾವಲಿಸಾಬ ಅಡ್ಡೇವಾಲೆ, ಗುತ್ತಿಗೆದಾರ ಸುರೇಶ ಭೂಮರೆಡ್ಡಿ, ಅಮರೇಶ ಕರಡಿ, ಎಂ.ಪಾಷಾ ಕಾಟನ್,  ಮಸ್ಜಿದ-ಎ-ಯೂಸೂಫಿಯಾ ಮಸೀದಿಯ ಆಡಳಿತಾಧಿಕಾರಿ ಮಹ್ಮದ್‌ಗೌಸ್ ಸರದಾರ ಸೇರಿದಂತೆ ಮುಸ್ಲಿಂ ಪಂಚ ಕಮೀಟಿ, ಮಸ್ಜೀದ್ ಆಡಳಿತ ಮಂಡಳಿ ಹಾಗೂ ನೌಜವಾನ ಕಮೀಟಿ ಅಧ್ಯಕ್ಷರು ಸರ್ವ ಸದಸ್ಯರು  ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಯ್ಯದ್ ಫೌಂಡೇಶಬ್ ವತಿಯಿಂದ ದರ್ಗಾ ಕಮೀಟಿ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
Please follow and like us:
error