ಸ್ವತಂತ್ರ ಹೋರಾಟ ಪತ್ರಿಕೆಯ ಸಂಪಾದಕ ಎಸ್.ಎಂ. ಮನೋಹರ ಪತ್ನಿ ಮಂಗಳ ನಿಧನ

ಹೊಸಪೇಟೆ: ಹೊಸಪೇಟೆಯ ಸ್ವತಂತ್ರ ಹೋರಾಟ ದಿನ ಪತ್ರಿಕೆಯ ಸಂಪಾದಕ ಎಸ್.ಎಂ. ಮನೋಹರ ಇವರ ಪತ್ನಿ ಮಂಗಳಾ(೪೮) ಶನಿವಾರ ಬೆಳಗಿನಜಾವ ನಿಧನ ಹೊಂದಿದ್ದಾರೆ.
ಹಲವುದಿನಗಳಿಂದ ಅಸ್ವಸ್ಥರಾಗಿದ್ದ ಅವರು ಧಾರವಾಡದ ಎಸ್‌ಡಿಎಂಸಿ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗಿನ ಜಾವ ನಿಧನ ಹೊಂದಿದ್ದಾರೆ. 
ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಶನಿವಾರ ಸಂಜೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಮೃತರ ಆತ್ಮಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಶೋಕ ವ್ಯಕ್ತ ಪಡಿಸಿ ಶೃದ್ಧಾಂಜಲಿ ಸಲ್ಲಿಸಿದೆ.

Leave a Reply