ಕೆನರಾ ಬ್ಯಾಂಕ್‌ನಿಂದ ಉಚಿತ ಶಿಲ್ಪಕಲಾ ಶಿಕ್ಷಣ

  ಬೆಂಗಳೂರು ಸಮೀಪದ ಜೋಗರದೊಡ್ಡಿಯಲ್ಲಿರುವ ಕೆನರಾಬ್ಯಾಂಕ್ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ ವಿಭಾಗಗಳಲ್ಲಿ ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
  ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲುಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ ವಿಭಾಗಗಳಲ್ಲಿ ಉಚಿತವಾಗಿ ತರಬೇತಿಯನ್ನು ೧೯೯೧ರಿಂದ ನೀಡುತ್ತಾ ಬಂದಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಸಮೀಪದಲ್ಲಿರುವ ಬಿಡದಿಯಲ್ಲಿ  ಈ ಕರಕುಶಲ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಸಂಸ್ಥೆ ಇದುವರೆಗೆ ಒಟ್ಟಾರೆ ೭೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಲ್ಪಾಕಲಾ ಶಿಕ್ಷಣವನ್ನು ನೀಡಿದೆ. ಇದರಲ್ಲಿ ಶೇಖಡ ೯೨ ರಷ್ಟು ವಿದ್ಯಾರ್ಥಿಗಳು ಲಾಭದಾಯಕ ಹುದ್ದೆಯಲ್ಲಿದ್ದಾರೆ. ಹಲವಾರು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ.  ಮರ ಮತ್ತು ಕಲ್ಲುಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ ತರಬೇತಿಯ ಅವಧಿಯು ೧೮ ತಿಂಗಳಾಗಿದ್ದು, ಕುಂಭಕಲೆ (ಟೆರಾಕೋಟಾ) ವಿಭಾಗದ ತರಬೇತಿ ಅವಧಿಯು ೬ ತಿಂಗಳಾಗಿರುತ್ತದೆ. ಅಭ್ಯರ್ಥಿಗಳು ಕನಿಷ್ಟ  ೭ನೇ ತರಗತಿಯಲ್ಲಿಉತ್ತೀರ್ಣರಾಗಿದ್ದು, ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿ, ಸಮವಸ್ತ್ರ, ಕಂಪ್ಯೂಟರ್ ಶಿಕ್ಷಣ, ಉಪಕರಣಗಳು/ ಕಚ್ಛಾಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಆಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಉಚಿತ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುವುದಲ್ಲದೆ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು.
       ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ ಮೇ ೨೫ ರಿಂದ ಮೇ ೩೦ ರೊಳಗೆ ಬೆಂಗಳೂರು ಸಮೀಪದ ಜೋಗರದೊಡ್ಡಿ (ಬಿಡದಿ ಹೋಬಳಿ, ರಾಮನಗರಜಿಲ್ಲೆ) ಯಲ್ಲಿರುವ ಕೆನರಾಬ್ಯಾಂಕ್ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಆಯ್ಕೆಯಾದ ಆಭ್ಯರ್ಥಿಗಳನ್ನು ಅದೇ ದಿನ ಸ್ಥಳದಲ್ಲೇ ತರಬೇತಿಗೆ ಹಾಜರಿಪಡಿಸಿಕೊಳ್ಳಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿ (ಮೊಬೈಲ್: ೯೯೦೦೧೫೮೮೮೫/೯೪೮೧೭೩೯೮೩೦) ಅವರನ್ನು ಸಂಪರ್ಕಿಸಬಹುದಾಗಿದೆ .
a
Please follow and like us:
error