fbpx

ಗಂಗಾವತಿ : ಚುನಾವಣಾ ವೀಕ್ಷಕರ ಸೂಚನೆ

 ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಪ್ರಭಾತ್ ಶಂಕರ್ ಐ.ಎ.ಎಸ್ ರವರು ಭಾರತ ಚುನಾವಣಾ ಆಯೋಗದಿಂದ ನೇಮಕವಾಗಿದ್ದು, ಇವರು ಈಗಾಗಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುತ್ತಾರೆ. 
  ಪ್ರಭಾತ್ ಶಂಕರ್- ೯೪೮೧೬೮೩೨೩೪ ಅವರು ಗಂಗಾವತಿ ನಗರದ ಸರ್ಕೀಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿರುತ್ತಾರೆ.  ಸಾರ್ವಜನಿಕರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಅಥವಾ ಅಭ್ಯರ್ಥಿಗಳು ವೀಕ್ಷಕರನ್ನು ಭೇಟಿ ಮಾಡಬೇಕಿದ್ದಲ್ಲಿ ಪ್ರತಿದಿನ ಸಂಜೆ   ೪-೦೦ ರಿಂದ ೬-೦೦ ಘಂಟೆಯವರೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಛೇರಿಯಲ್ಲಿ (ತಹಶೀಲ್ದಾರರ ಕಾರ್ಯಾಲಯ ಮಿನಿವಿಧಾನ ಸೌಧ ಗಂಗಾವತಿ) ಮಾಡಬಹುದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Please follow and like us:
error

Leave a Reply

error: Content is protected !!