ಮೌಲ್ಯಮಾಪನ ಬಹಿಷ್ಕಾರ

ಕೊಪ್ಪಳ : ಪರಸ್ಪರ ಕಚ್ಚಾಟದಲ್ಲಿ ತೊಡಗಿರುವ ಶಿಕ್ಷಕರ ಬಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರೌಢ ಶಾಲಾ ಶಿಕ್ಷಕರರಲ್ಲಿ ಎರಡು ಬಣಗಳಿದ್ದು ಒಂದು ಬಣದವರು ಮೌಲ್ಯಮಾಪನ ಬಹಿಷ್ಕರಿಸಿದರೆ ಇನ್ನೊಂದು ಬಣದವರು ಮೌಲ್ಯಮಾಪನಕ್ಕೆ ಸಿದ್ದ ಎನ್ನುತ್ತಿದ್ದಾರೆ. ಎರಡೂ ಬಣಕ್ಕೆ ಸೇರದ ಶಿಕ್ಷಕರು ಇವರ ರಾಜಕೀಯ ಕಂಡು ಬೇಸತ್ತಿದ್ದಾರೆ. ನಿನ್ನೆ ನಡೆದ ಮೌಲ್ಯಮಾಪನ ಬಹಿಷ್ಕಾರ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಇದು. ವಿವಿದ ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದವರು ಮೌಲ್ಯಮಾಪನ ಬಹಿಷ್ಕರಿಸಿ ನಡೆದರೆ ಇನ್ನೊಂದು ಬಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಮೌಲ್ಯಮಾಪನ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು. ಎರಡೂ ಬಣಗಳ ಜಗಳದಲ್ಲಿ ಆತಂಕಗೊಂಡಿರುವುದು ವಿದ್ಯಾರ್ಥಿಗಳು, ಅವರ ಪೋಷಕರು

Leave a Reply