You are here
Home > Koppal News > ೧೦೧ ಜೊಡಿ ಉಚಿತ ಸಾಮೂಹಿಕ ವಿವಾಹ ಪ್ರಚಾರಕ್ಕೆ ಚಾಲನೆ

೧೦೧ ಜೊಡಿ ಉಚಿತ ಸಾಮೂಹಿಕ ವಿವಾಹ ಪ್ರಚಾರಕ್ಕೆ ಚಾಲನೆ

ಕರ್ನಾಟಕ ಜನಹಿತ ವೇದಿಕೆ ಕೊಪ್ಪಳ ಜಿಲ್ಲಾ ಘಟಕ 
ಕೊಪ್ಪಳ : ಕೊಪ್ಪಳ ನಗರದಲ್ಲಿ ಮಾರ್ಚ ೦೮ ರಂದು ಕರ್ನಾಟಕ ಜನಹಿತ ವೇದಿಕೆಯ ರಾಜ್ಯ ಮಟ್ಟದ ಪ್ರಥಮ ಸಮಾವೇಶದ ಅಂಗವಾಗಿ ಸರ್ವಧರ್ಮಗಳ ೧೦೧ ಜೊಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಚಾರವನ್ನು ಬುಧವಾರ ೨೧-೦೧-೨೦೧೫ ರಂದು ಆರಂಭಗೊಂಡಿತ್ತು. ಅಪ್ಪಳಿಸು  ಪತ್ರಿಕೆಯ ಸಂಪಾದಕ ರುದ್ರಪ್ಪ ಭಂಡಾರಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಸಾಹಿತಿಗಳಾದ ಶಿವಪ್ರಸಾದ ಹಾದಿಮನಿ, ಹೆಚ್.ಹನಮಂತ ಶೆಟ್ಟಿ ಹಾಗೂ ಕಜವೇ ಜಿಲ್ಲಾದ್ಯಕ್ಷರಾದ ಬಸವರೆಡ್ಡಿ ಶಿವನಗೌಡ್ರು, ತಾಲೂಕ ಉಪಾದ್ಯಕ್ಷರಾದ ನಾಗರಾಜ ಬಾರಕೇರ, ಹಾಲವರ್ತಿ ಗ್ರಾಮ ಘಟಕದ ಅಧ್ಯಕ್ಷರಾದ ಗವಿಸಿದ್ದಪ್ಪ ಗೊರವರ, ಶೇಖಪ್ಪ ಎಸ್ ಹೊಸಳ್ಳಿ, ಮಲ್ಲಿಕಾರ್ಜುನ, ದುರಗೇಶ ಸಿರಗೇರ, ಮಾರುತಿ ಜಕಾತಿ, ಖಾಜಾ ಸಾಬ್, ಬಾಬಾ, ಮಂಜುನಾಥ ಶಿರಿಗೇರಿ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಪ್ರಚಾರ ವಾಹನವು ಬುಧವಾರದಿಂದ ಕೊಪ್ಪಳ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಾಲೂಕಾ ಅಧ್ಯಕ್ಷರಾದ ಬಿ.ಶ್ರವಣಕುಮಾರ ಈರಣ್ಣ ತಿಳಿಸಿದ್ದಾರೆ.

Leave a Reply

Top