ಮೈಸೂರಿನಲ್ಲಿ ದಸರಾ ವಸ್ತುಪ್ರದರ್ಶನ ಮಳಿಗೆ

  ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ಪ್ರಸಕ್ತ ವರ್ಷದ ದಸರಾ ವಸ್ತುಪ್ರದರ್ಶನವನ್ನು ಮೈಸೂರಿನ ದೊಡ್ಡಕೆರೆ ಮೈದಾನದ ಆವರಣದಲ್ಲಿ ಆಯೋಜಿಸಲಾಗಿದೆ.
  ಈ ವಸ್ತು ಪ್ರದರ್ಶನದಲ್ಲಿ ರಾಜ್ಯದ ಸಾಂಸ್ಕೃತಿಕ ವೈಭವದ ಭವ್ಯ ಪರಂಪರೆಯನ್ನು ಬಿಂಬಿಸುವ ಹಾಗೂ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿವಿಧ ಇಲಾಖೆ, ನಿಗಮ/ಮಂಡಳಿಗಳು, ಸಹಕಾರಿ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು ತಮ್ಮ ಮಳಿಗೆಗಳನ್ನು ತೆರೆಯಬಹುದಾಗಿದೆ.  ವಸ್ತುಪ್ರದರ್ಶನವು ೨೦೧೩ ಅಕ್ಟೋಬರ್ ೦೫ ರಿಂದ ೨೦೧೪ ರ ಜನವರಿ ೦೨ ರವರೆಗೆ ನಡೆಯಲಿದೆ.  ಮಳಿಗೆಗಳನ್ನು ತೆರೆಯಲು ಬಯಸುವ ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆ, ನಿಗಮ/ಮಂಡಳಿ, ಸಹಕಾರಿ ಸಂಸ್ಥೆ, ಸಾರ್ವಜನಿಕ ಉದ್ದಿಮೆಯವರು ಹೆಚ್ಚಿನ ಮಾಹಿತಿಯನ್ನು ಕೊಪ್ಪಳ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ತಿಳಿಸಿದ್ದಾರೆ.
Please follow and like us:

Leave a Reply