fbpx

ಮಾ.೨೨ ರಂದು ಕುಷ್ಟಗಿಯಲ್ಲಿ ,ಹಲಗೇರಿ ಮಾ.೨೪ ರಂದು ಮತದಾನ ಜಾಗೃತಿ ಕಾರ್ಯಕ್ರಮ

ಕೊಪ್ಪಳ,ಮಾ.೨೦(ಕರ್ನಾಟಕ ವಾರ್ತೆ): ರಾಜ್ಯ ಕಾನೂನು ಮಹಾವಿದ್ಯಾಲಯ ಹುಬ್ಬಳ್ಳಿ, ರಾಷ್ಟ್ರೀಯ ಸೇವಾ ಯೋಜನೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಮಾ.೨೩ ರಿಂದ ೨೯ ರವರೆಗೆ ಹಲಗೇರಿಯ ದ್ಯಾಮವ್ವನಗುಡಿ ಆವರಣದಲ್ಲಿ ಸಂಜೆ ೪.೦೦ ಗಂಟೆಗೆ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ಉದ್ಘಾಟನೆ ಸಮಾರಂಭ ಜರುಗಲಿದೆ.
ಮಾ.೨೩ ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಗವಿಸಿದ್ದೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಶರಣಬಸಪ್ಪ ಬಿಳೆಎಲಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಕಾನೂನು ಮಹಾವಿದ್ಯಾಲಯದ ಸಂಯೋಜಕ ಡಾ.ಕೆ.ಬಿ.ಬ್ಯಾಳಿ ಅವರು ವಹಿಸಲಿದ್ದಾರೆ. 
ಮಾ.೨೪ ರಂದು : ಮತದಾರರ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಲಗೇರಿಯ ಶಿಕ್ಷಣ ಪ್ರೇಮಿ ರಾಯನಗೌಡ ಪಾಟೀಲ್ ಅವರು ವಹಿಸಲಿದ್ದಾರೆ. ಉಪನ್ಯಾಸಕರಾಗಿ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ಅವರು ಭಾಗವಹಿಸುವರು.
ಮಾ.೨೫ ರಂದು : ಸುರಕ್ಷಿತ ತಾಯ್ತನ ಆಂದೋಲನ ಸುರಕ್ಷಾ ಕಲಾ ತಂಡದಿಂದ ತಾಯ್ತನ ಜಾಗೃತಿ ಕಾರ್ಯಕ್ರಮ ಜರುಗಲಿದೆ.
  ಮತದಾನ ಜಾಗೃತಿ ಅಭಿಯಾನ 
ಕೊಪ್ಪಳ,ಮಾ.೨೦(ಕರ್ನಾಟಕ ವಾರ್ತೆ): ನೆಹರು ಯುವ ಕೇಂದ್ರ, ಜಿಲ್ಲಾ ಯುವ ಸಮಾವೇಶ ಮತ್ತು ಯುವಾಕೃತಿ ಹಾಗೂ ಆರೋಗ್ಯ ನೀರು ನೈರ್ಮಲ್ಯಕರಣ ಹಾಗೂ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಮಾ.೨೨ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಕುಷ್ಟಗಿಯ ಹೊಳೆಯಮ್ಮ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಜರುಗಲಿದೆ.
 ಕಾರ್ಯಕ್ರಮದ ಉದ್ಘಾಟನೆಯನ್ನು ಕುಷ್ಟಗಿ ತಹಶೀಲ್ದಾರ್ ಎನ್.ಬಿ.ಪಾಟೀಲ್ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್.ವಾಯ್.ತಳವಾರ ಅವರು ವಹಿಸಲಿದ್ದಾರೆ. ಉಪನ್ಯಾಸಕರಾಗಿ ಅಲ್ಲಾನಗರದ ಶಿಕ್ಷಕ ದೇವರಡ್ಡಿ ಬಿ.ಡಂಬ್ರಳ್ಳಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. 
ಮುಖ್ಯ ಅತಿಥಿಗಳಾಗಿ ಸಿಪಿಐ ರುದ್ರೇಶ ಎಸ್.ಉಜ್ಜನಕೊಪ್ಪ, ಯೂನಿಸೆಫ್ ಸಿಪಿಪಿ ಜಿಲ್ಲಾ ಸಂಯೋಜಕ ಹರೀಶ ಜೋಗಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾಲತಿ ಎಮ್.ಗಾಯಕವಾಡ ಅವರು ಪಾಲ್ಗೊಳ್ಳುವರು  .
Please follow and like us:
error

Leave a Reply

error: Content is protected !!