ವರುಣನ ಕೃಪೆಗಾಗಿ ಬಾಲ ಮಕ್ಕಳಿಂದ ಭಜನೆ

ಕೊಪ್ಪಳ ಜೂ:  ಮುನಿಸಿಕೊಂಡ ಮಳೆರಾಯನ ಆಗಮನಕ್ಕೆ ತಾಲೂಕಿನ ಓಜನಹಳ್ಳಿ ಗ್ರಾಮದ ಬಾಲಮಕ್ಕಳು ಒಂಭತ್ತು ದಿನಗಳಕಾಲ ಶ್ರದ್ಧ್ದೆ ಭಕ್ತಿಯಿಂದ ಪ್ರತಿದಿನ ಬೆಳಿಗಿನ ಜಾವ ಐದುಗಂಟೆಗೆ ಹಾಗೂ ಸಂಜೆ ಐದುಗಂಟೆಗೆ ಮಡಿ-ಹುಡಿಯಿಂದ  ಸ್ನಾನ ಮಾಡಿ, ಗ್ರಾಮದಲ್ಲಿರುವ ಎಲ್ಲಾ ದೇವರಿಗೆ ದೀಪ ಬೆಳಗಿಸುವ ಮೂಲಕ ಬೇಗ ಬಾರೋ ಮಳೆರಾಯ ಎಂದು ಪ್ರಾರ್ಥಿಸಿಕೊಂಡರು. ಈ ಮಕ್ಕಳಿಗೆ ಗ್ರಾಮದ ಹಿರಿಯರಾದ ಹುಸೇನ್‌ಪಾಷಾ ಟೇಲರ್, ಸಿದ್ಧಪ್ಪ ಕಾಟ್ರಳ್ಳಿ ಮುಂತಾದವರು ಪ್ರೋತ್ಸಾಹಿಸಿದ್ದಾರೆ ಎಂದು  ಕಲಾತಂಡದ ನಾಯಕ ಶಿವಮೂರ್ತಿ ಮೇಟಿತಿಳಿಸಿದ್ದಾರೆ. 
Please follow and like us:
error