ಆನೆಗೊಂದಿ ಉತ್ಸವ : ವಿವಿಧ ಕ್ರೀಡಾಕೂಟಗಳ ಫಲಿತಾಂಶ

  ಆನೆಗೊಂದಿ ಉತ್ಸವದ ಅಂಗವಾಗಿ ಭಾನುವಾರದಂದು ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳ ಫಲಿತಾಂಶದ ವಿವರ ಇಂತಿದೆ.
  ಪುರಷರಿಗಾಗಿ ಏರ್ಪಡಿಸಲಾಗಿದ್ದ ೧೨ ಕಿ.ಮೀ. ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಅಳವಂಡಿಯ ಮಂಜಪ್ಪ ಪುರದ- ಪ್ರಥಮ.  ಗದುಗಿನ ದುರಗಪ್ಪ ಆರ್. ಮ್ಯಾಗೇರಿ- ದ್ವಿತೀಯ ಹಾಗೂ ಆನೆಗೊಂದಿಯ ಬಂಗಾರಪ್ಪ ಮಾರೆಪ್ಪ ತೃತೀಯ ಸ್ಥಾನ ಪಡೆದುಕೊಂಡರು. 
  ಭಾರ ಎತ್ತಿ ಬಸ್ಕಿ ಹೊಡೆಯುವ ಸ್ಪರ್ಧೆಯಲ್ಲಿ ಮರಿಯಮ್ಮನಹಳ್ಳಿಯ ಪಾಷಾವಲಿ- ಪ್ರಥಮ, ಆನೆಗೊಂದಿಯ ಹುಸೇನಿ- ದ್ವಿತೀಯ ಹಾಗೂ ಕಂಪ್ಲಿಯ ಮಾರುತಿ ತೃತೀಯ ಬಹುಮಾನ ಪಡೆದುಕೊಂಡರು.  ೫೭ ಕೆ.ಜಿ. ವಿಭಾಗದ ಕುಸ್ತಿ ಪಂದ್ಯದಲ್ಲಿ ನೂಕಾಪುರದ ದಾನೇ ಪ್ರಥಮ, ಹಾತಲಗೇರಿಯ ರಂಗಪ್ಪ- ದ್ವಿತೀಯ ಹಾಗೂ ಬಾದಾಮಿಯ ಪುಂಡಲೀಕ ತೃತೀಯ ಸ್ಥಾನ ಪಡೆದುಕೊಂಡರು.  ೬೫ ಕೆ.ಜಿ. ವಿಭಾಗದಲ್ಲಿ ಲಕ್ಕುಂಡಿಯ ಸಂತೋಷ್ ಕವಲೂರ- ಪ್ರಥಮ, ಮರಿಯಮ್ಮನಹಳ್ಳಿಯ ಶ್ರೀನಿವಾಸ- ದ್ವಿತೀಯ ಹಾಗೂ ಮಲ್ಲಾಪುರದ ಶೇಖರಗೌಡ ತೃತೀಯ ಸ್ಥಾನ ಪಡೆದುಕೊಂಡರು.  ೭೦ ಕೆ.ಜಿ. ವಿಭಾಗದಲ್ಲಿ ಲಕ್ಕುಂಡಿಯ ಪರಸಪ್ಪ ಹಟ್ಟಿ- ಪ್ರಥಮ, ಮರಿಯಮ್ಮನಹಳ್ಳಿಯ ಹನುಮಂತ- ದ್ವಿತೀಯ.  ಹಾತಲಗೇರಿಯ ಬಸವರಾಜ ಡಂಬಳ- ತೃತೀಯ ಸ್ಥಾನ ಪಡೆದರು.  ೭೪ ಕೆ.ಜಿ. ಮೇಲ್ಪಟ್ಟ ತೂಕದ ವಿಭಾಗದಲ್ಲಿ ಮರಿಯಮ್ಮನಹಳ್ಳಿಯ ಸೈಫುಲ್ಲ- ಪ್ರಥಮ ಸ್ಥಾನ ಪಡೆಯುವುದರ ಜೊತೆಗೆ ಆನೆಗೊಂದಿ ಕೇಸರಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಹಾತಲಗೇರಿಯ ಸೋಮಪ್ಪ ಮೇಲ್ಮನಿ- ದ್ವಿತೀಯ ಹಾಗೂ ಲಕ್ಕುಂಡಿಯ ಅಶೋಕ ಹಟ್ಟಿ ತೃತೀಯ ಸ್ಥಾನ ಪಡೆದರು.
  ಮೈನವಿರೇಳಿಸಿದ ಮಲ್ಲಕಂಬ ಸ್ಪರ್ಧೆಯಲ್ಲಿ ಲಕ್ಷ್ಮೇಶ್ವರದ ರವಿ ಚನ್ನಬಸಪ್ಪ ಬಳಿಗಾರ- ಪ್ರಥಮ.  ರಾಮಗಿರಿಯ ಗಿರೀಶ ಜಿಡ್ಡಿಮನಿ- ದ್ವಿತೀಯ ಹಾಗೂ ಶಿಗ್ಲಿಯ ಶಬ್ಬೀರ್ ಷರೀಫ್‌ಸಾಬ ಗದಗ- ತೃತೀಯ ಸ್ಥಾನ ಪಡೆದುಕೊಂಡರು.  ಬಾಲ್ ಬ್ಯಾಡ್ಮಿಂಟನ್ ಕ್ರೀಡಾ ಸ್ಪರ್ಧೆಯಲ್ಲಿ ಬಳ್ಳಾರಿಯ ಮನಿಕೇತನರೆಡ್ಡಿ ಪ್ರಥಮ, ಬೊಮ್ಮನಾಳದ ಈಶ್ವರಪ್ಪ- ದ್ವಿತೀಯ ಹಾಗೂ ಸಂಡೂರಿನ ಶ್ರೀನಿವಾಸ ತೃತೀಯ ಬಹುಮಾನ ಪಡೆದರು.  
  ಮಹಿಳೆಯರಿಗೆ ಏರ್ಪಡಿಸಲಾದ ೬ ಕಿ.ಮೀ. ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಲಕ್ಕುಂಡಿಯ ಶಾಹಿದಾ ಬಳಿಗಾರ- ಪ್ರಥಮ.  ಮುಂಡರಗಿಯ ಬಷೀರ್ ವಾರದ- ದ್ವಿತೀಯ ಹಾಗೂ ಅಸುಂಡಿಯ ಪ್ರೇಮಾ ಹುಚ್ಚಣ್ಣವರ್- ತೃತೀಯ ಸ್ಥಾನ ಪಡೆದರು.  ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಕುಷ್ಟಗಿಯ ಮಂಜುಭಾರ್ಗವಿ- ಪ್ರಥಮ, ಹುಲಿಗಿಯ ಉಮಾ- ದ್ವಿತೀಯ ಹಾಗೂ ಆನೆಗೊಂದಿಯ ಸ್ನೇಹರಾಣಿ ತೃತೀಯ ಬಹುಮಾನ ಗಿಟ್ಟಿಸಿಕೊಂಡರು.  
  ವಿಕಲಚೇತನರಿಗಾಗಿ ಏರ್ಪಡಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕೊಪ್ಪಳದ ಮುಬಾರಕ್ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದರೆ, ಗಂಗಾವತಿಯ ಅಶೋಕ್ ನಾಯಕತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

Related posts

Leave a Comment