ತಿಂಥಿಣಿಯ ಹಾಲುಮತ ಸಮಾವೇಶದಲ್ಲಿ ಕೆ.ಎಂ.ಸಯ್ಯದ್‌ರಿಗೆ ಸನ್ಮಾನ

ಕೊಪ್ಪಳ : ನಗರದ ಸಮಾಜಸೇವಕ ಹಾಗು ಜೆಡಿಎಸ್ ಮುಖಂಡರಾದ ಕೆ.ಎಂ.ಸಯ್ಯದ್‌ರಿಗೆ ತಿಂಥಿಣಿಯಲ್ಲಿ ನಡೆಯುತ್ತಿರುವ ಹಾಲುಮತ ಸಂಸ್ಕೃತಿ  ವೈಭವ-೨೦೧೨ರ ಕಾರ್‍ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಗುಲ್ಬರ್ಗಾ ವಿಭಾಗ ತಿಂಥಿಣಿ ಬ್ರಿಜ್ ದೇವದುರ್ಗದಲ್ಲಿ ಹಮ್ಮಿಕೊಂಡಿರುವ ೩ ದಿನದ ಹಾಲುಮತ ಸಂಸ್ಕೃತಿ ವೈಭವ ಕಾರ್‍ಯಕ್ರಮದಲ್ಲಿ ಕಲೆ,ಸಾಹಿತ್ಯ , ಸಮಾಜ ಸೇವೆ ಇತರೆ ರಂಗಗಳಲ್ಲಿ ಅದ್ವೀತಿಯ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನ ಮಾಡಲಾಯಿತು.  ಈ ಸಂದರ್ಭದಲ್ಲಿ  ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಜಿ, ಶ್ರೀ ನಿರಂಜನಾಂದ ಪುರಿ ಮಹಾಸ್ವಾಮಿಜಿ, ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಜಿ,  ಶ್ರೀ ಶಿವಾನಂದ ಪುರಿ ಮಹಾಸ್ವಾಮಿಜಿ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಸಂಸದರಾದ ಎಚ್.ವಿಶ್ವನಾಥ, ಮಾಜಿ ಸಚಿವ ಹುಲ್ಲಪ್ಪ ಮೇಟಿ, ರಾಜ್ಯ ಕನಕ ನೌಕರ ಸಂಘದ ಗೋಪಾಲಕೃಷ್ಣಸ್ವಾಮಿ,ಕನಕ ನೌಕರ ಪದಾಧಿಕಾರಿ ಶರಣಪ್ಪ ಸಿಂದೋಗಿ, ಸೈಯದ್ ಅಭಿಮಾನಿಗಳ ಸಂಘದ ಗುಡದಪ್ಪ ಬನಪ್ಪನವರ, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕ ಪಂಚಾಯತ್ ಸದಸ್ಯರು ಸೇರಿದಂತೆ ಸಮಾಜದ ಚುನಾಯಿತ ಪ್ರತಿನಿಧಿಗಳು , ಸಾವಿರಾರು ಸಮಾಜಬಾಂಧವರು  ಉಪಸ್ಥಿತರಿರಿದ್ದರು. 
Please follow and like us:
error