ನಾಲ್ವರು ವಕೀಲರ ಬಂಧನ

  ಬೆಂಗಳೂರು, ಮಾ.3: ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ಮೇಲೆ ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘದ ಕಾರ್ಯದರ್ಶಿ ರಂಗನಾಥ್, ಸೋಮೇಶ್, ಅರುಣ್ ನಾಯಕ್ ಹಾಗೂ ಸಂತೋಷ್ ಎಂಬ ನಾಲ್ವರು ವಕೀಲರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಗೆ ಸಂಬಂಧಿಸಿದಂತೆ ಎಸಿಪಿ ಗಚ್ಚಿನಕಟ್ಟಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 25 ಮಂದಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
  ಆರೋಪಿಗಳಾದ ಮಹೇಶ, ದೊಗಾಡಿ, ರಾಜಶೇಖರ್, ಎಂ. ರಾಮಾಂಜನೇಯ, ನಾರಾಯಣ ಸ್ವಾಮಿ, ದೇವೇಂದ್ರ, ಮುನಿಸ್ವಾಮಿ, ಸುರೇಶ್, ಅರವಿಂದ ಗೌಡ, ಮೋಹನ್ ದೊರೆ, ರಾಮಾಂಜನೇಯ, ಶ್ರೀನಿವಾಸ, ವೆಂಕಟರಾಮ ರೆಡ್ಡಿ, ಪ್ರಸಾದ ಕುಮಾರ್, ಲಕ್ಷ್ಮಣ, ಶ್ರೀನಿವಾಸ್, ಸಂದೀಪ್ ಶೆಟ್ಟಿ, ಕೆ.ರಮೇಶ್, ರಘು , ಎನ್. ಮಂಜುನಾಥ , ಗಿರೀಶ್, ಶಿವಕುಮಾರ್, ಶಶಿಧರ್, ಕೆಂಪುದೂಲಿನ ವಕೀಲ ಸೇರಿದಂತೆ ಒಂದು ಸಾವಿರ ವಕೀಲರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅ‘ನ್ಯಾಯ’ವಾದಿಗಳ ವಿರುದ್ಧ 30 ಪ್ರಕರಣ ದಾಖಲು

ಬೆಂಗಳೂರು, ಮಾ.3: ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ನಡೆದ ಹಲ್ಲೆ, ದೌರ್ಜನ್ಯ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಟ್ಟು 30 ಪ್ರಕರಣಗಳನ್ನು ದಾಖಲಿಸಲಾಗಿದೆ.ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ದೊಂಬಿ, ದಾಂಧಲೆ, ಸಾರ್ವಜನಿಕ ಆಸ್ತಿಗೆ ಹಾನಿ, ಹಲ್ಲೆ, ಕಲ್ಲು ತೂರಾಟ ಸೇರಿದಂತೆ ವಿವಿಧ ಪ್ರಕರಣಗಳಡಿ ಮೊದಕ್ದಮೆ ದಾಖಲು ಮಾಡಲಾಗಿದೆ. ನಿನ್ನೆ ಪೊಲೀಸರು ನಡೆಸಿದ ಹಲ್ಲೆಯಿಂದ 10ಕ್ಕೂ ಹೆಚ್ಚು ಮಂದಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಹಲ್ಲೆಗೊಳಗಾಗಿದ್ದರು.
ಭಾರತೀಯ ದಂಡ ಸಂಹಿತೆಯ ಕಲಂ 143, 147, 184, 149, 435, 437, 307, 332, 333, 355 ಹಾಗೂ 502ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:
error

Related posts

Leave a Comment