ಕವಲೂರು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

 ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರಕಾರಿ ಪ್ರೌಢಶಾಲೆಯಲ್ಲಿ ದಿ: ೧೭-೦೯-೨೦೧೪ ರಂದು ವಿಶೇಷವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಸದರಿ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ೧೦೦ ಮೀ ಓಟ, ಗುಂಡು ಎಸೆತ, ಚಕ್ರ ಎಸೆತ, ಬಿಸ್ಕೆಟ್ ತಿನ್ನುವ ಸ್ಫರ್ಧೆ, ಸ್ಲೋ ಸೈಕ್ಲಿಂಗ್ ಸ್ಫರ್ಧೆ, ಮ್ಯೂಜಿಕಲ್ ಚೇರ್ ಸ್ಫರ್ಧೆ ,  ಚಮಚಯಲ್ಲಿ ನಿಂಬೆಹಣ್ಣು ಓಟದ ಸ್ಫರ್ಧೆಗಳನ್ನು  ಏರ್ಪಡಿಸಿ: ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ನಂತರ ಎಲ್ಲಾ ಶಿಕ್ಷಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸದರಿ ಕಾರ‍್ಯಕ್ರಮವನ್ನು ಮಾಜಿ   ಅಧ್ಯಕ್ಷರಾದ   ತಿಮ್ಮಣ್ಣ ಸಿದ್ನೇಕೊಪ್ಪ ಇವರ ನೇತೃತ್ವದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳು ಹಾಗೂ Sಆಒಅ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಆಯೋಜಿಸಿದ್ದರು. ಕಾರ‍್ಯಕ್ರಮದಲ್ಲಿ ಭೂ ಧಾನಿಗಳಾದ   ವಿಶ್ವನಾಥ ಹೆಬ್ಬಾಳ ಹಾಜರಿದ್ದರು. ಎಂದು ಪ್ರಕಟಣೆಯಲ್ಲಿ ಮುಖ್ಯೋಪಾಧ್ಯರಾದ ವಿ.ವಿ ಗೊಂಡಬಾಳ ತಿಳಿಸಿದ್ದಾರೆ.
Please follow and like us:

Related posts

Leave a Comment