ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ : ಅರ್ಜಿ ಆಹ್ವಾನ

  ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯ ಪ್ರಕಾರದ ಕೃತಿಗಳಿಗೆ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ನೀಡುವ ಯೋಜನೆಗಾಗಿ ಅರ್ಜಿ ಆಹ್ವಾನಿಸಿದೆ.
     ಮಕ್ಕಳ ಸಾಹಿತ್ಯದ ೫ ಪ್ರಕಾರಗಳಿಗೆ ೨೦೧೨-೧೩ನೇ ಸಾಲಿಗಾಗಿ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದ್ದು, ಜನೇವರಿ ೨೦೧೨ ರಿಂದ ಡಿಸೆಂಬರ್ ೨೦೧೨ ರವರೆಗೆ ಪ್ರಕಟಗೊಂಡ ಕವನ ಸಂಕಲನ, ಕಥಾ ಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು), ಮಕ್ಕಳ ಜನಪದ (ಸೃಜನಾತ್ಮಕ/ಸಂಪಾದಿತ) ವೈಜ್ಞಾನಿಕ ಕೃತಿ, ಅನುವಾದಿತ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಸಂಕೀರ್ಣ (ವಿಮರ್ಶೆ, ಲೇಖನ ಇತ್ಯಾದಿ) ಪುಸ್ತಕಗಳನ್ನು ಪ್ರಶಸ್ತಿಗಾಗಿ ಹಾಗೂ ಮಕ್ಕಳು ಮಕ್ಕಳಿಗಾಗಿ ಪ್ರಕಟಿಸಿದ ಕಾವ್ಯ, ಕಥೆ, ಕೃತಿಗಳನ್ನು ಸಹ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.  ಮೇಲ್ಕಂಡ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಗಿರಬೇಕು, ಪ್ರಶಸ್ತಿಗಳಿಗೆ ಆಯ್ಕೆಯಾದ ಕೃತಿಗಳಿಗೆ ರೂ.೫,೦೦೦/- ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವುದು. ಪ್ರತಿಯೊಂದು ಪುಸ್ತಕದ ೪ ಪ್ರತಿಗಳನ್ನು ಯೋಜನಾಧಿಕಾರಿಗಳು, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ, ಪೊಲೀಸ್ ಹೆಡ್ ಕ್ವಾರ್ಟಸ್ ಎದುರು, ಮಹಾಂತೇಶ ನಗರ, ಧಾರವಾಡ-೮ ಇವರಿಗೆ ದಿನಾಂಕ: ೦೧-೦೧-೨೦೧೩ ರ ಒಳಗಾಗಿ ಸಲ್ಲಿಸಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳು  ತಿಳಿಸಿದ್ದಾರೆ.

Please follow and like us:
error