ಸಂಗಣ್ಣ ಕರಡಿ ಗೆಲುವಿಗೆ ದೀಡ್‌ನಮಸ್ಕಾರ

ಬಿಜೆಪಿ ಅಭ್ಯರ್ಥಿ ಕರಡಿಸಂಗಣ್ಣ ನವರ ಗೇಲುವಿಗೆ ಪತ್ರೇಪ್ಪ ಹಾಲಪ್ಪ ಕಟಗೆ ಗಡಿಯಾರ ಕಂಬದ ಹತ್ತಿರ ಇರುವ ಮಾರುತೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ದಿನಾಂಕ ೨೩.೦೪.೨೦೧೩ ರಂದು ದೀಡ್‌ನಮಸ್ಕಾರ ಹಾಕಿದರು. ನಂತರ ಮಾತನಾಡಿ ಸಂಗಣ್ಣನವರ ಬಡವರ ಕಷ್ಟಗಳಿಗೆ ಸ್ಪಂದಿಸುವ ನಾಯಕ ಅಲ್ಲದೆ ಬಡವರಿಗಾಗಿ ಆಶ್ರಯ ಮನೆಗಳನ್ನು ತಂದಿದ್ದಾರೆ, ೨೫೦ ಹಾಸಿಗೆ ಜಿಲ್ಲಾಆಸ್ಪತ್ರೆ ಕಟ್ಟಿಸಿದ್ದಾರೆ ಆದ್ದರಿಂದ ಸಂಗಣ್ಣ ಕರಡಿ ಗೆಲ್ಲಬೇಕೆಂದು ದೇವರಿಗೆ ಪ್ರಾರ್ಥಿಸುತ್ತೇನೆಂದು ಹೇಳಿದರು.
 ಈ ಸಂದಂರ್ಭದಲ್ಲಿ ನಗರ ಸಭೆ ಸದಸ್ಯರಾದ ಶಿವು ಜಂಗ್ಲಿ, ಪಂಪಣ್ಣ ಮಗಜಿ, ಮಾರುತಿ ಮಾರಾಟಿ, ಮಹಿಳಾ ಮುಂಖಡರಾದ ದೇವಕ್ಕ ಮಂಗಳೂರು, ಮಹೇಶ್ ಅಂಗಡಿ, ಉಮೇಶ ಕರಡೆಕರ್, ಚರಂತಯ್ಯ ಉಜ್ಜನೀಮಠ್, ಪರಮೇಶ ಶೆಟ್ಟರ್, ದಿನೇಶ್ ಆರೇರ್, ರಘ ಕನಕಗಿರಿ, ಮುಂತಾದವರು ಉಪಸ್ಥಿತರಿದ್ದರೆಂದು ಬಿಜೆಪಿ ವಕ್ತಾರರಾದ ಹಾಲೇಶ್ ಕಂದಾರಿ  ತಿಳಿಸಿದ್ದಾರೆ.

Related posts

Leave a Comment