fbpx

ವಿಜಯವಾಡ – ಹುಬ್ಬಳ್ಳಿ ನಿತ್ಯ ಸಂಚಾರ ರೈಲ್ವೆಗೆ ಸಂಸದ ಸಂಗಣ್ಣರಿಂದ ಪೂಜೆ

ಕೊಪ್ಪಳ ಜ- ೨೭ ಬಹುದಿನಗಳಿಂದ ಈ ಭಾಗದ ಜನರ ಬೇಡಿಕೆಯಾಗಿದ್ದ ವಿಜಯವಾಡ – ಹುಬ್ಬಳ್ಳಿ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ರೈಲು ದಿನನಿತ್ಯ ಸಂಚರಿಸಬೇಕೆಂದು ಕೇಂದ್ರ ರೈಲ್ವೇ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಲಾಗಿತ್ತು, ಸಂಸದ ಸಂಗಣ್ಣ ಕರಡಿಯವರು ಮತ್ತು ಈ ಭಾಗದ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಜನೇವರಿ ೨೬ ರಿಂದ ವಿಜಯವಾಡ – ಹುಬ್ಬಳ್ಳಿ ರೈಲು ದಿನನಿತ್ಯ ಸಂಚರಿಸಲು ರೈಲ್ವೇ ಇಲಾಖೆ ಆದೇಶ ಹೊರಡಿಸಿದ್ದರಿಂದ ಇಂದು ನಗರದ ರೈಲ್ವೇ ನಿಲ್ದಾಣದಲ್ಲಿ ವಿಜಯವಾಡ ಹುಬ್ಬಳ್ಳಿ ರೈಲ್ವೇಗೆ ಸಂಸದ ಸಂಗಣ್ಣ ಕರಡಿ ಪೂಜೆ ನೆರೆಔಎರಿಸಿ ಹರ್ಷ ವ್ಯಕ್ತಪಡಿಸಿ ಸಿಹಿ ಹಂಚಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಂಗಣ್ಣ ಕರಡಿ ಕರ್ನಾಟಕದ ಗಡಿ ಭಾಗದ ಅನೇಕ ವಿಧ್ಯಾರ್ಥಿಗಳು ಆಂದ್ರದ ವಿಜಯವಾಡದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು ದಿನನಿತ್ಯ ಸಾವಿರಾರು ವಿಧ್ಯಾರ್ಥಿಗಳು ಕರ್ನಾಟಕ – ಆಂದ್ರ ನಡುವೆ ಸಂಚರಿಸಲು ಈ ರೈಲು ದಿನನಿತ್ಯ ಓಡಿಸಬೇಕೆಂದು ಕೇಂದ್ರ ರೈಲ್ವೇ ಇಲಾಖೆ ಅನೇಕ ಸಲ ಮನವಿ ಮಾಡಲಾಗಿತ್ತು ಕೊನೆಗು ನಮ್ಮ ಬೇಡಿಕೆ ಈಡೇರಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಬೇಡಿಕೆ  ಸದ್ಯ ಗದಗದಿಂದ ಪಂಡರಾಪುರಕ್ಕೆ ಸಂಚರಿಸುತ್ತಿರುವ ಗದಗ – ಪಂಡರಾಪುರ ರೈಲ್ವೇಯನ್ನು ಬಳ್ಳಾರಿಯಿಂದ ಸಂಚರಿಸಲು ಕೇಂದ್ರ ರೈಲ್ವೇ ಇಲಾಖೆಗೆ ಈಗಾಗಲೇ ಪತ್ರ ಬರೆದು ಬೇಡಿಕೆ ಇಟ್ಟು ಒತ್ತಾಯಿಸಲಾಗಿದೆ ಈ ಭಾಗದ ವಿಜಯನಗರ ಹಂಪಿ, ಆನೆಗೊಂದಿ, ಹುಲಿಗೆಮ್ಮ ದೇವಸ್ಥಾನ, ಕನಕಗಿರಿ ಕನಕಾಚಲಪತಿ ಪ್ರಸಿದ್ದ ಪ್ರವಾಸಿ ತಾಣಗಳಾಗಿದ್ದು ಪ್ರವಾಸಿಗರು ಈ ಭಾಗದಿಂದ ಪ್ರವಾಸ ಮುಗಿಸಿ ವಿಜಯಪುರ ಪಂಡರಾಪುರಕ್ಕೆ ಹೋಗಲು ಅನುಕೂಲವಾಗುವದರಿಂದ ಗದಗ – ಪಂಡಾಪುರಕ್ಕೆ ಹೊರಡುವ ರೈಲನ್ನು ಬಳ್ಳಾರಿಯಿಂದ ಹೊರಡುವಂತೆ ಆದೇಶಿಸಬೇಕೆಂದು ಕೇಂದ್ರಕ್ಕೆ ಮತ್ತೆ ಒತ್ತಡ ಹೇರಲಾಗುವದು ಎಂದು ಹೇಳಿದ ಅವರು ಭಾಗ್ಯನಗರ ಕೊಪ್ಪಳ ಕಿನ್ನಾಳ ಕೊಪ್ಪಳ ಕೆಳ ಮತ್ತು ಮೇಲ ಸೇತುವೆಗಳು ನಿರ್ಮಾಣಕ್ಕೆ ಈಗಾಗಲೇ ಅಧಿಕಾರಿಗಳ ಪರಿಶೀಲನೆ ಕಾರ್ಯ ಮುಗಿದಿದು ಟೆಂಡರ್ ಪ್ರಕ್ರಿಯೇ ಕಾರ್ಯ ಕೂಡ ಮುಗಿದಿದ್ದು ಮಾರ್ಚತಿಂಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ ಇದಕ್ಕಾಗಿ ರಾಜ್ಯ ಸರ್ಕಾರ ೫ ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು
ಈ ಸಂದರ್ಭದಲ್ಲಿ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಡಾ|| ಮಲ್ಲಿಕಾರ್ಜುನ ರಾಂಪೂರ, ಗವಿಸಿದ್ದಪ್ಪ ಕಂದಾರಿ, ವಿ.ಎಂ.ಬೂಸನೂರಮಠ, ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ವೀರುಪಾಕ್ಷಯ್ಯ ಗದಗಿನಮಠ, ಅಪ್ಪಣ್ಣ ಪದಕಿ, ರಾಜು ಭಾಕಳೆ, ಡಾ|| ಕೊಟ್ರೇಶ ಶೆಡ್ಮಿ, ಸದಾಶಿವಯ್ಯ ಹಿರೇಮಠ, ಮಂಜುನಾತ ಅಂಗಡಿ, ಚಂದ್ರಶೇಖರಗೌಡ ಪಾಟೀಲ, ನೀಲಕಂಠಯ್ಯ ಹಿರೇಮಠ, ಪಕ್ಷದ ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ, ಕಳಕಪ್ಪ ಜಾದವ್, ಮಲ್ಲಣ್ಣ ಡಿ, ಉಮೇಶ ಕುರಡಿಕರ್, ದೇವರಾಜ ಹಾಲಸಮುದ್ರ, ಹಾಲೇಶ ಕಂದಾರಿ, ವಿರುಪಾಕ್ಷಪ್ಪ ನವೋದಯ, ಬಸವರಾಜ ನೀಲರಗಿ, ನಾಮದೇವ ಜಕ್ಕಲಿ, ಮಾರುತಿ ಕಾರಟಗಿ, ಗವಿಸಿದ್ದಪ್ಪ ಚಿನ್ನೂರು, ಶೋಭಾ ನಗರಿ, ಹೇಮಲತಾ ನಾಯಕ್, ದತ್ತು ವೈದ್ಯ, ಸಂಗಮೇಶ ಡಂಬಳ, ಸಿದ್ದಣ್ಣ ವಾರದ ಸೇರಿದಂತೆ ನುರಾರು ಕಾರ್ಯಕರ್ತರು ಉಪಸ್ತಿತರಿದ್ದರು,
   ವಿಜಯವಾಡ-ಹುಬ್ಬಳ್ಳಿ ನೂತನ ರೈಲಿನ ವೇಳಾಪಟ್ಟಿ ಇಂತಿದೆ.  ವಿಜಯವಾಡದಿಂದ ರಾತ್ರಿ ೭-೪೫ ಕ್ಕೆ ಹೊರಡುವ ರೈಲು ಗಾಡಿ ಸಂಖ್ಯೆ: ೧೭೨೨೫ ರೈಲು ಬೆಳಿಗ್ಗೆ ೫-೪೦ ಕ್ಕೆ ಗುಂತಕಲ್, ೬-೫೩ ಕ್ಕೆ ಬಳ್ಳಾರಿ, ೭-೩೦ ಕ್ಕೆ ತೋರಣಗಲ್, ೮-೧೫ ಕ್ಕೆ ಹೊಸಪೇಟೆ, ೮-೩೫ ಕ್ಕೆ ಮುನಿರಾಬಾದ್, ೮-೫೫ ಕ್ಕೆ ಕೊಪ್ಪಳ, ೧೦-೦೮ ಕ್ಕೆ ಗದಗ, ೧೦-೨೫ ಕ್ಕೆ ಅಣ್ಣಿಗೇರಿ ಮೂಲಕ ಬೆಳಿಗ್ಗೆ ೧೧-೨೦ ಕ್ಕೆ ಹುಬ್ಬಳ್ಳಿ ತಲುಪಲಿದೆ.  ಪ್ರತಿನಿತ್ಯ ಮಧ್ಯಾಹ್ನ ೧-೩೦ ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ ೧೭೨೨೬  ರೈಲು, ಮಧ್ಯಾಹ್ನ ೨ ಗಂಟೆಗೆ ಅಣ್ಣಿಗೇರಿ, ೨-೨೫ ಕ್ಕೆ ಗದಗ, ೩-೩೦ ಕ್ಕೆ ಕೊಪ್ಪಳ, ೩-೫೩ ಕ್ಕೆ ಮುನಿರಾಬಾದ್, ೦೪-೦೫ ಕ್ಕೆ ಹೊಸಪೇಟೆ, ೦೪-೪೫ ಕ್ಕೆ ತೋರಟಗಲ್, ೦೫-೨೫ ಕ್ಕೆ ಬಳ್ಳಾರಿ, ೦೬-೩೫ ಕ್ಕೆ ಗುಂತಕಲ್ ಮಾರ್ಗವಾಗಿ ಮರುದಿನ ಬೆಳಿಗ್ಗೆ ೦೫-೧೫ ಕ್ಕೆ ವಿಜಯವಾಡ ತಲುಪಲಿದೆ.  
Please follow and like us:
error

Leave a Reply

error: Content is protected !!