fbpx

ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚೈತನ್ಯ ರಥ ಯಾತ್ರೆಗೆ ಚಾಲನೆ

 ಕೊಪ್ಪಳ ತಾಲೂಕ ಪಂಚಾಯತಿಯಿಂದ ತಾಲೂಕಿನ ವಿವಿಧ ಗ್ರಾಮಗಳಾದ ಹಟ್ಟಿ, ಕಾತರಕಿ-ಗುಡ್ಲಾನೂರ ಹಾಗೂ ಗೊಂಡಬಾಳ ಗ್ರಾ.ಪಂ.ಯಲ್ಲಿ ನಿರ್ಮಲ ಭಾರತ ಅಭಿಯಾನ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕುರಿತು ಕಲಾತಂಡದವರು ಬೀದಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ಜನರಿಗೆ ಮಾಹಿತಿ ನೀಡಿದರು. ಅಲ್ಲದೇ ಗ್ರಾಮಸ್ಥರಿಗೆ ವಿವಿಧ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಅಲ್ಲದೇ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
  ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಗೋವಿಂದರೆಡ್ಡಿ ಮಾದಿನೂರ, ಗ್ರಾ.ಪಂ. ಸದಸ್ಯರಾದ ಕಲ್ಲೇಶಪ್ಪ ಹಳ್ಳಿಕೇರಿ, ಮೌಲಾಸಾಬ ತಳಕಲ್, ರುದ್ರಮ್ಮ ಡೊಣ್ಣಿ, ತಾಲೂಕ ಐಇಸಿ ಸಂಯೋಜಕರಾದ ದೇವರಾಜ ಪತ್ತಾರ, ತಾಲೂಕ ಸಾಮಾಜಿಕ ಲೆಕ್ಕ ಪರಿಶೋಧಕ ಸಂಯೋಜಕರಾದ ಮಹೇಶ ಗೊರಂಟ್ಲಿ, ಕರವಸೂಲಿಗಾರ ದೊಡ್ಡನಗೌಡ, ಗಣಕಯಂತ್ರ ನಿರ್ವಾಹಕರಾದ ಮಾರುತಿ ಹಣವಾಳ, ಎನ್‌ಬಿಎ ಸ್ವಚ್ಚತಾಧೂತರಾದ ಮಹೇಶ, ರೇವಣಪ್ಪ ಸೇರಿದಂತೆ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀರಾಮನಗರ : ಚೈತನ್ಯ ರಥ ಯಾತ್ರೆಗೆ ಚಾಲನೆ
 ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಬಗ್ಗೆ  ಚೈತನ್ಯ ರಥ ಕಾರ್ಯಕ್ರಮವನ್ನು ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾ.ಪಂ.ಅಧ್ಯಕ್ಷೆ ನರಸಮ್ಮ ಸಣ್ಣಬಸಪ್ಪ ಹಾಗೂ ಸರ್ವ ಸದಸ್ಯರು ಚಾಲನೆ ನೀಡಿದರು.
 ಜನಸಾಮಾನ್ಯರಿಗೆ ವಿವಿಧ ಯೋಜನೆ ಮಾಹಿತಿ ಹಾಗೂ ಯೋಜನೆಯಲ್ಲಿರುವ ಸವಲತ್ತುಗಳನ್ನು ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಈ ಚೈತನ್ಯ ರಥದ ಪ್ರಚಾರದ ಮೂಲಕ   ಮಾಹಿತಿಯನ್ನು ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಕುಟುಂಬವು ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಲು ಕರ ಪತ್ರದ ಮೂಲಕ ಪ್ರಚಾರ ಮಾಡಲಾಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಗಳಪ್ಪ ನಾಯಕ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಗಿರಿಧರ, ತಾಲೂಕ ಐ.ಇ.ಸಿ. ಸಂಯೋಜಕರಾದ ಕೃಷ್ಣ ನಾಯಕ್, ತಾಲೂಕ ಸಾಮಾಜಿಕ ಲೆಕ್ಕ ಪರಿಶೋಧಕರಾದ ವೀರನಗೌಡ, ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಹಾಗೂ ಗ್ರಾ.ಪಂ.ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಧೋಳ : ಚೈತನ್ಯ ರಥ ಯಾತ್ರೆಗೆ ಚಾಲನೆ


ನಿರ್ಮಲ ಭಾರತ ಅಭಿಯಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ೧೫ ಅಂಶಗಳ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವ ಬಗ್ಗೆ ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಇವರ ನೇತೃತ್ವದಲ್ಲಿ ಚೈತನ್ಯ ರಥ ಕಾರ್ಯಕ್ರಮವನ್ನು ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮ ಪಂಚಾಯತಿಯಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಚಾಲನೆ ನೀಡಿದರು.

 ಚೈತನ್ಯ ರಥ ಯಾತ್ರೆ ಮೂಲಕ ಮತ್ತು ದಲಿತಕಲಾ ಮಂಡಳಿಯಿಂದ ಜನಪದ ಹಾಗೂ ಬೀದಿ ನಾಟಕದ ಮುಖಾಂತರ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ನಿರ್ಮಲ ಭಾರತ ಯೋಜನೆ, ಸಾಕ್ಷರ ಭಾರತ ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸಲಾಯಿತು. ಅಲ್ಲದೇ ನಮ್ಮ ಹೊಲ ನಮ್ಮ ದಾರಿ, ರೈತರ ಕಣ, ಮನೆಗೊಂದು ಶೌಚಾಲಯ, ರಾಜೀವ್‌ಗಾಂಧಿ ಚೈತನ್ಯ ಯೋಜನೆ, ಇಂಗು ಗುಂಡಿ ನಿರ್ಮಾಣ, ಸ್ಮಶಾನ ಅಭಿವೃದ್ದಿ, ನಮ್ಮ ಹಳ್ಳಿ ನಮ್ಮ ನೀರು, ರಾಜೀವ್ ಗಾಂಧಿ ಸೇವಾ ಕೇಂದ್ರ, ಕುರಿ/ದನದ ದೊಡ್ಡಿ, ಕೃಷಿಕ ಮಹಿಳೆ ಸಶಕ್ತೀಕರಣ, ಸಂಜೀವಿನಿ ಮುಂತಾದ ಯೋಜನೆಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಶಿವಲೀಲಾ ವೀರಯ್ಯ ಬೀಳಗಿಮಠ, ಉಪಾಧ್ಯಕ್ಷ ಕರಿಸಿದ್ದಪ್ಪ ಗೂಳಪ್ಪ ದಗಲಿ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಶ್ವನಾಥ ರಾಥೋಡ, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು, ತಾಲೂಕ ಐ.ಇ.ಸಿ. ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ದಲಿತ ಕಲಾಮಂಡಳಿಯ ಅಧ್ಯಕ್ಷ ಸಿದ್ದಪ್ಪ ಡಿ.ಕಲಾಲಬಂಡಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!