ಕೋಳೂರಿನಲ್ಲಿ ಕೃಷಿ ಆಧಾರಿತ ಆದಾಯ ಉತ್ಪನ್ನ ಚಟುವಟಿಕೆಗಳ ತರಬೇತಿ.

ಕೊಪ್ಪಳ
ಸೆ. ೧೬ (ಕ ವಾ) ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಮಹಿಳಾ
ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಸಹಬಾಗಿತ್ವದೊಂದಿಗೆ ಕೊಪ್ಪಳ ತಾಲೂಕಿನ ಕೋಳೂರು
ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ   ಕೃಷಿ ಆಧಾರಿತ ಆದಾಯ ಉತ್ಪನ್ನ
ಚಟುವಟಿಕೆಗಳ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು
     ಈ ಸಂದರ್ಭದಲ್ಲಿ ಕೊಪ್ಪಳ
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಗೃಹ ವಿಜ್ಞಾನ ವಿಷಯ ತಜ್ಞೆ ಕವಿತಾ ಉಳ್ಳಿಕಾಶಿ ಅವರು
ಎರೆಹುಳು ಕೃಷಿ ಮತ್ತು ಟೊಮ್ಯಟೊ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಿದರು.   
ಬಸವಲಿಂಗಮ್ಮ, ಮೇಲ್ವಿಚಾರಕರು, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಇವರು ಮಹಿಳಾ
ಗ್ರಾಮ ಸಭೆ, ಸ್ತ್ರೀ ಶಕ್ತಿ ಗೊಂಚಲಿನ ಬಗ್ಗೆ ತರಬೇತಿ ನೀಡಿದರು. ಗೀತಾ, ಆಪ್ತ
ಸಮಾಲೋಚಕರು ಮಹಿಳಾ ಸ್ವಉದ್ಯೋಗಗಳ ಬಗ್ಗೆ ತಿಳಿಸಿದರು. ಸುಮಾರು ೫೦ ಸ್ತ್ರೀ ಶಕ್ತಿ
ಮಹಿಳೆಯರು ಭಾಗವಹಿಸಿದ್ದರು.

Please follow and like us:
error