ನ. ೧೬ ರಂದು ಕೊಪ್ಪಳದಲ್ಲಿ ಅಖಿಲ ಭಾರತ ಸಹಕಾರ ಸಮ್ಮೇಳನ

ಕೊಪ್ಪಳ ನ.: ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನಗರದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಡಗರದಿಂದ ಆಚರಿಸಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರು ಹೇಳಿದ್ದಾರೆ.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ಸಹಕಾರ ಸಮ್ಮೇಳನ ಏರ್ಪಡಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈಲ್ಲೆಯಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಸಹಕಾರ ಸಮ್ಮೇಳನ ಕಾರ್ಯಕ್ರಮ ಏರ್ಪಡಿಸುತ್ತಿರುವುದು ತುಂಬ ಸಂತಸದ ಸಂಗತಿ. ಗುಲಬರ್ಗಾ ವಿಭಾಗ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ನ. ೧೬ ರಂದು ನಗರದ ನೂತನ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮವನ್ನು ಹ ಮ್ಮಿಕೊಳ್ಳಲಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನಪರಿಷತ್ ಸಿದಸ್ಯರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ಅಧ್ಯಕ್ಷರಾಗಿರುವ ಹಾಲಪ್ಪ ಆಚಾರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ ವಿವಿಧ ಜಿಲ್ಲೆಗಳ ಹರಿಯ ಸಹಕಾರಿಗಳು ಕಾರ್ಯಕ್ರಮದಲ್ಲಿ ಭಾಗವಇಸಲಿದ್ದಾರೆ. ಮುನ್ನೂರಕ್ಕೂ ಹೆಚ್ಚು ಸಿದ್ಧ ವಸ್ತುಗಳ ಹಾಗೂ ಆಹಾರ ಪದಾರ್ಥಗಳ ಮಾರಾಟಕ್ಕೆ ಮಳಿಗೆಗಳನ್ನು ತೆರೆಯಲಾಗುವುದು. ಸಹಕಾರಿ ವಲಯಕ್ಕೆ ಸೇರಿದ ರೈತ ಸೇವಾ ಸಹಕಾರಿ ಸಂಘ, ಕ್ರಿಬ್ಕೋ ಸಹಕಾರ ಮಾರಾಟ ಮಂಡಳಿಯ ಮಳಿಗೆಗಳು, ಅಧಿಕಾರಿ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗೆ ಗುಲಬರ್ಗಾ ವಿಭಾಗದ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ಸಹಕಾರಿಗಳು ಜನಪ್ರತಿನಿಧಿಗಳು, ಸಹಕಾರ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಅವಿರತ ಶ್ರಮ ವಹಿಸಲಿದ್ದಾರೆ. ಉತ್ತರ ಕರ್ನಾಟಕದ ಜನ ಆರ್ಥಿಕವಾಗಿ ಹಿಂದುಳಿದಿರಬಹುದು, ಸಾಂಸ್ಕೃತಿಕವಾಗಿ ಹಾಗೂ ಮಾನಸಿಕವಾಗಿ ಅತ್ಯಂತ ಶ್ರೀಮಂತರಾಗಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಈ ಭಾಗದ ಜನರ ಶ್ರಮ ಶಕ್ತಿಯನ್ನು ರಾಜ್ಯಕ್ಕೆ ಪರಿಚುಸಿಕೊಡುವುದಾಗಿ ಶೇಖರಗೌಡ ಮಾಲಿಪಾಟೀಲ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಪ್ರಧಾನ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ರಾಜ್ಯ ಮಟ್ಟದ ಈ ಕಾರ್ಯಕ್ರಮಕ್ಕೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಸ್ಥಳೀಯರು ವ್ಯವಸ್ಥಿತವಾಗಿ ನಡೆಸಿಕೊಡುವಂತೆ ಅವರು ಮನವಿ ಮಾಡಿದರು
ರಾಯಚೂರು ಆರ್‌ಡಿಸಿಸಿ ಉಪಾಧ್ಯಕ್ಷ ರಮೇಶ ವೈದ್ಯ ಅವರು ಮಾತನಾಡಿ, ಈ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ, ಆಹಾರ, ವೇದಿಕೆ, ಪ್ರಚಾರ, ಸನ್ಮಾನ ಹಾಗೂ ಹಣಕಾಸು ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ರಾಯಚೂರು ಆರ್.ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜ್, ಬಳ್ಳಾರಿ ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಂಗಪ್ಪ, ರಾಯಚೂರು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶರಣೇಗೌಡ ಬಯ್ಯಾಪುರ, ಗಂಗಾವತಿ ಸಿ.ಬಿಎಸ್.ಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಸಿದ್ದಾಪುರ, ಚೆನ್ನಬಸವಸ್ವಾಮಿ, ಮುನಿಯಪ್ಪ ಹುಬ್ಬಳ್ಳಿ, ರಾಯಚೂರು ಜಂಟಿನಿಬಂಧಕರಾದ ಟಿ.ಓ. ಸುನಂದಮ್ಮ ಅಲ್ಲದೆ ಹಿರಿಯ ಸಹಕಾರಿಗಳು, ಸಹಕಾರ ಇಲಾಖೆ ಸಹಾಯಕ ನಿಬಂಧಕರು ಮುಂತಾದ ಗಣ್ಯರು ಭಾಗವಹಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಉಪನಿಬಂಧಕ ಜಬ್ಬಾರ್ ಬೇಗ್ ಸ್ವಾಗತಿಸಿ ವಂದಿಸಿದರು.
Please follow and like us:
error