You are here
Home > Koppal News > ಉಚಿತ ಶಿಲ್ಪಕಲಾ (ಕರಕುಶಲ) ತರಬೇತಿಗೆ ಆಹ್ವಾನ

ಉಚಿತ ಶಿಲ್ಪಕಲಾ (ಕರಕುಶಲ) ತರಬೇತಿಗೆ ಆಹ್ವಾನ

ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ (ಟೆರ್ರಾಕೋಟ) ವಿಭಾಗಗಳಲ್ಲಿ ಉಚಿತ ತರಬೇತಿಗಾಗಿ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ವಿಭಾಗದ ತರಬೇತಿ ಅವಧಿಯು ೧೮ ತಿಂಗಳಾಗಿದ್ದು, ಕುಂಭ ಕಲೆಯ (ಟೆರ್ರಾಕೋಟ) ತರಬೇತಿಯ ಅವಧಿಯು ಆರು ತಿಂಗಳಾಗಿರುತ್ತದೆ. 
ವಿದ್ಯಾರ್ಹತೆಯು ಕನಿಷ್ಠ ೭ನೇ ತರಗತಿ ಉತ್ತೀರ್ಣ, ವಯೋಮಿತಿ ೧೮ ರಿಂದ ೩೫ ವರ್ಷದವರಾಗಿರಬೇಕು. ತರಬೇತಿಯ ಅವಧಿಯಲ್ಲಿ ಉಚಿತ ಊಟ, ವಸತಿ, ತರಬೇತಿಗೆ ಬೇಕಾದ ಕಚ್ಚಾ ಸಾಮಗ್ರಿ, ತರಬೇತಿ ಪ್ರವಾಸ, ನುರಿತ ಶಿಕ್ಷಕರಿಂದ ತರಬೇತಿಗಳನ್ನು ನೀಡಲಾಗುವುದು. ಗ್ರಾಮೀಣ, ಬಡ, ಆರ್ಥಿಕವಾಗಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ/ಪಂಗಡದ ನಿರುದ್ಯೋಗಿ ಯುವಕರಿಗೆ ಪ್ರಾಧಾನ್ಯತೆ ನೀಡಲಾಗುವುದು. 
ನೇರ ಸಂದರ್ಶನವು ದಿನಾಂಕ ಸೆಪ್ಟೆಂಬರ್ ೨೧, ೨೦೧೨ ರಿಂದ ಸೆಪ್ಟೆಂಬರ್ ೨೯, ೨೦೧೨ ರವರೆಗೆ ಜರುಗಲಿದೆ.ಪ್ರವೇಶಕ್ಕೆ ಅರ್ಜಿಗಳನ್ನು ಸಂದರ್ಶನ ದಿನ ಅಥವಾ ಮುಂಗಡವಾಗಿ ಪಡೆದು ಸಲ್ಲಿಸಬಹುದು.ಆಸಕ್ತ  ಯುವಕರು  ತಮ್ಮ ಪೋಷಕರೊಡನೆ ತಮ್ಮ ಖರ್ಚಿನಲ್ಲಿ ಹಾಜರಾಗತಕ್ಕದ್ದು. ತರಬೇತಿಯ ತರಗತಿಗಳು ೨೦೧೨ ಅಕ್ಟೋಬರ್ ತಿಂಗಳ ಮೊದಲನೆಯ ವಾರದಲ್ಲಿ ಪ್ರಾರಂಭಗೊಳ್ಳಲಿದೆ.ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.ನಿರ್ದೇಶಕರು, ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ, ಜೋಗರದುಡ್ಡಿ, ಬಿಡದಿ ಕೈಗಾರಿಕಾ ಪ್ರದೇಶ, ಬಿಡದಿ -೫೬೨೧೦೯, ರಾಮನಗರ ಜಿಲ್ಲೆ. ಮೊಬೈಲ್ : ೯೯೦೦೧೫೮೮೮೫  / ೯೭೪೩೨೭೨೦೪೮ 

Leave a Reply

Top