ಹುತಾತ್ಮ ಮಲ್ಲಿಕಾರ್ಜುನ ಬಂಡೆ ಕುರಿತ ಚಲನಚಿತ್ರ ನಿರ್ಮಾಣ

ಬಂಡೆ ಕರ್ನಾಟಕ ರಿಯಲ್ ಸಿಂಗಂ ರೂ. ೧ ಕೋಟಿಯಲ್ಲಿ ಕಿಚ್ಚ ಅಭಿನಯ ಸಾಧ್ಯತೆ
ಕೊಪ್ಪಳ, ಮಾ. ೧೦. ಗುಲ್ಬರ್ಗಾದ ಹುತಾತ್ಮ ವೀರಯೋಧ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆರವರಿಗೆ ಗಂಡುಗಲಿ ಕುಮಾರರಾಮ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿದ ಕೊಪ್ಪಳದ ಮಂಜುನಾಥ ಜಿ. ಗೊಂಡಬಾಳ ಬಂಡೆ ಕುರಿತು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಬಂಡೆ ಕುಟುಂಬ ಒಪ್ಪಿಗೆ ನೀಡಿದೆ.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಬಂಡೆ ಕರ್ನಾಟಕದ ರಿಯಲ್ ಸಿಂಗಂ ಹೆಸರಿನ ಚಲನಚಿತ್ರವನ್ನು ನಿರ್ಮಾಣ ಮಾಡಲು ಯೋಜಿಸಿದ್ದು, ಬಂಡೆ ಕುಟುಂಬದವರು ಸಂಪೂರ್ಣ ಒಪ್ಪಿಗೆ ನೀಡಿದ್ದು. ಒಂದು ಭಾಗವನ್ನು ಅವರ ಹೆಸರಲ್ಲಿ ಉತ್ತಮ ಸೇವೆಗೆ ಟ್ರಸ್ಟ್ ಮಾಡಿ ನಿಧಿ ಸ್ಥಾಪಿಸಲಾಗುವದು ಎಂದ ಅವರು ಬಂಡೆ ಪಾತ್ರಕ್ಕೆ ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಲಾಗುವದು, ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ರನ್ನು ಸಂಪರ್ಕಿಸಿ ಒಪ್ಪಿಗೆ ಪಡೆಯಲಾಗುವದು, ಈ ಕುರಿತು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳವರು ಸುದೀಪರೊಂದಿಗೆ ಮಾತನಾಡುತ್ತಿದ್ದಾರೆ ಶೀಘ್ರದಲ್ಲಿ ನಿರ್ಧರಿಸಲಾಗುವದು ಎಂದರು.
ಎಪ್ರಿಲ್-ಮೇ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲಾಗುವದು, ಚಿತ್ರದ ಕಥೆಯನ್ನು ಪತ್ರಕರ್ತ ರವಿ ಕುಲಕರ್ಣಿ ಸಿದ್ದಪಡಿಸುತ್ತಿದ್ದಾರೆ, ಕೊಪ್ಪಳ, ರಾಯಚೂರ, ಗುಲಬರ್ಗಾ ಹಾಗೂ ಬೀದರಗಳಲ್ಲಿ ಜೊತೆಗೆ ಸ್ವಲ್ಪ ಭಾಗವನ್ನು ಮೈಸೂರ, ಬೆಳಗಾವ ಮತ್ತು ಹೈದರಾಬಾದಗಳಲ್ಲಿ ಚಿತ್ರಿಕರಿಸಲಾಗುವದು. ಚಿತ್ರದಲ್ಲಿ ೫ ಫೈಟಿಂಗ್ ಮತ್ತು ೫ ಹಾಡುಗಳನ್ನು ಸೇರಿಸಲಾಗುವದು. ಚಿತ್ರ ಮಲ್ಲಿಕಾರ್ಜುನ ಬಂಡೆಯವರ ಆದರ್ಶ ಮತ್ತು ಕರ್ತವ್ಯ ನಿಷ್ಠೆಗೆ ಒತ್ತುಕೊಡಲಾಗುವದು. ಚಿತ್ರದ ನಾಯಕಿ ಹೊಸ ಮುಖ ಆಗಲಿದ್ದು ಸ್ಥಳಿಯರಿಗೆ ಆದ್ಯತೆ ನೀಡಲಾಗುವದು. ಎರಡು ಹಾಡುಗಳನನು ಬಾಲಿವುಡ್ ಗಾಯಕರು ಹಾಡಿದರೆ ಮೂರನ್ನು ಸ್ಥಳಿಯರಿಗೆ ಅವಕಾಶ ನೀಡಲಾಗುವದು. ಚಿತ್ರದ ಸಂಗೀತ ನಿರ್ದೇಶಕ, ಕಲಾ ನಿರ್ದೇಶಕ, ಸ್ಟಂಟ್ ನಿರ್ದೇಶಕ ಯಾರೆಂಬುದನ್ನು ಇನ್ನಷ್ಟೆ ನಿರ್ಧರಿಸಬೇಕಿದೆ ಎಂದರು. ಚಿತ್ರ ನಿರ್ಮಾಣಕ್ಕೆ ಬಂಡೆ ಕುಟುಂಬ ಒಪ್ಪಿಗೆ ನೀಡಿದ್ದು, ಯಾವುದೇ ಹಣದ ಷರತ್ತು ಇಟ್ಟಿಲ್ಲ ಕೇವಲ ಚಿತ್ರ ಉತ್ತಮವಾದ ಸತ್ಯದಿಂದ ಕೂಡಿರಬೇಕು ಎಂದು ಹೇಳಿದ್ದಾರೆ ಎಂದವರು ವಿವರಿಸಿದರು.
ಚಿತ್ರಕ್ಕೆ ತಮ್ಮ ಜೊತೆ ಮತ್ತೆ ನಾಲ್ಕು ಜನ ಸಹ ನಿರ್ಮಾಪಕರು ಇರಲಿದ್ದಾರೆ, ಹಿರಿಯ ಚಲನಚಿತ್ರ ನಿರ್ದೇಶಕ ಸಿ. ವಿ. ಶಿವಶಂಕರ, ನಿರ್ದೇಶಕ ಪತ್ರಕರ್ತರಮೇಶ ಸುರ್ವೆ ಹಾಗೂ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿಯವರ ಮಾಗದರ್ಶನ ಪಡೆಯಲಾಗುವದು ಎಂದ ಗೊಂಡಬಾಳ ಎಲ್ಲರ ಸಹಕಾರ ಕೋರಿದರು. ಈ ಭಾಗದಲ್ಲಿ ಚಿತ್ರ ಬದಲಾವಣೆ ತರಲಿದೆ, ಜೊತೆಗೆ ಚಿತ್ರರಂಗದಲ್ಲಿ ಹೊಸತನ ತರಲಾಗುವದು ಎಂದರು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಕರ್ಕಿಹಳ್ಳಿ ಹಾಗೂ ಶಿವಾನಂದ ಹೊದ್ಲೂರ ಇದ್ದರು.

Related posts

Leave a Comment