ಸಮಗ್ರ ಅಭಿವೃದ್ದಿಗೆ ಕಾಂಗ್ರೆಸಗೆ ಮತ ನೀಡಿ – ಬಸವರಾಜ ರಾಯರಡ್ಡಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರ  ಹಸ್ತಾಂತರ ಮಾಡದಿರುವ ಅನುಕಂಪ ಪಡೆದು ರಾಜ್ಯದ ಚುಕ್ಕಾಣಿ ಹಿಡಿದ ಬಿ.ಜೆ.ಪಿ ಮುಖ್ಯಮಂತ್ರಿ ಅದಿಖಾರ ಪಡೇದ ಎಂಟೆ ದಿವಸಗಳಲ್ಲಿ ರೈತರ ಮೆಲೆ ಗುಂಡಿನ ದಾಳಿ ನಡೆಸಿ, ಆ ರೈತರು ರೈತರೆ ಅಲ್ಲಾ ಗುಂಡಾಗಳು ಎಮದು ಸ್ಪಷ್ಠಿಕರಣ ನೀಡಿ ಅವರೊಬ್ಬ ರೈತ ವಿರೋಧಿ ಮುಖ್ಯಮಂತ್ರಿ ಎಂಬುದನ್ನು ಸಾಬಿತು ಪಡಿಸಿದರು, 
ಯಲಬುರ್ಗಾ ಕ್ಷೇತ್ರ ಅಭ್ಯರ್ಥಿ ಬಸವರಾಜ ರಾಯರಡ್ಡಿ ಅವರು ಶುಕ್ರವಾರ ತಾಳೂಕಿನ ಬನಾಪೂರ, ಲಕಮಾಪೂರ, ತಳಬಾಳ, ವೀರಾಪುರಗಲಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಾ ಅವರು ತಾವು ಶಾಸಕರಾಗಿದ್ದಾಗ ಯಲಬುರ್ಗಾ ಕ್ಷೆತ್ರಗಳಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳಿಗೂ ಈಗಿನ ಶಾಸಕ ಗುಳಗಣ್ಣನವರ ಅವಧಿಯಲ್ಲಿ ಆದ ಕಾಮಗಾರಿಗಳಿಗು ಮತದಾರರೆ ತಾಳೆ ಹಾಕಿಕೊಳ್ಳಬೆಕೆಂದು ವಿನಂತಿ ಮಾಡಿಕೊಂಡರು. ಮುಂದೆ ಮಾತನಾಡಿದ ಅವರು ತಮಗೆ ಈ ಸಲ ಚುನಾಯಿತ ಗೊಳಿಸಿದ್ದಲ್ಲಿ ಕೇವಲ ಐದೆ ವರ್ಷಗಳಲ್ಲಿ ಗದಗ ದಿಂದವಾಡಿ ರೈಲು ಮಾರ್ಗ ಪೂರ್ತಿ ಗೊಳಿಸುವದಲ್ಲದೆ, ಕೃಷ್ಣ ‘ಬಿ’ ಸ್ಕೀಮಿನ ಅಡಿಯಲ್ಲಿ ಈ ಭಾಗವನ್ನು ಪೂರ್ತಿ ಯಾಗಿ ನಿರಾವರಿ ಗೊಳಿಸುವದಲ್ಲದೆ ತುಂಗಬದ್ರಾ ನದಿಯಿಂದ ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ಸೌಲಭ್ಯ ದೊರಕಿಸಿ ಕೊಡುವುದಾಗಿ ಹೇಳಿದರು. ಅಲ್ಲದೆ ಹೈದ್ರಾಬಾದ್ ಕನಾಟಕ ಅಭಿವೃದ್ದಿ ಪೂರಕವಾದ ಈ ಭಾಗದ ವಿದ್ಯಾರ್ಥಿಗಳ ಉದ್ಯೋಗ ಖಾತ್ರಿಗಾಗಿ ೩೭೧ ಕಲಂ ವಿಧೆಯಕ ಯಥಾವತ್ ಜಾರಿಗೊಳಿಸಲು ಶ್ರಮಿಸುವದಾಗಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಲು ಕೋರಿದರು ಸಬೆಯಲ್ಲಿ ಯಂಕಣ್ಣ ಯರಾಸಿ ವೈಜನಾಥ ದಿವಟರ್, ಅರ್ಜುನಸಾ ಕಾಟವಾ, ಪ್ರಶಾಂತ ರಾಯ್ಕರ, ಸಿದ್ದಲಿಂಗಸ್ವಾಮಿ ಹಿರೆಮಠ, ಜಾಕಿರ ಹುಸೇನ ಕಿಲ್ಲೆದಾರ, ಯಲ್ಲಪ್ಪಾ ಕಾಟ್ರಳ್ಲಿ, ಮಲ್ಲಪ್ಪ ಕವಲೂರ, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment