ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ

ಪ್ರವಾದಿ ಮಹಮದ್ ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ.  ಪ್ರವಾದಿ ಅವರ ಆಶಯದಂತೆ ಸಾಗಿದರೆ ಪ್ರತಿ ಮಾನವನು ಪರಿಪೂರ್ಣತೆಯತ್ತ ಸಾಗಿ ಅರ್ಥಪೂರ್ಣವಾದ ಜೀವನ ನಡೆಸಲು ಸಾಧ್ಯ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ನಗರದಲ್ಲಿ ಜರುಗಿದ ಜಷ್ನೆ ಮಿಲಾದುನ್ನಬಿ ಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸಿ ಸರ್ವರಿಗೂ ಸುಭಾಶಯ ಕೋರಿ ಮಾತನಾಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ ಚಿಕ್ಕಮಕ್ಕಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜೆ.ಡಿಎಸ್. ಜಿಲ್ಲಾದ್ಯಕ್ಷ ಎಸ್.ಬಿ. ಖಾದ್ರಿ, ಮುಖಂಡರಾದ ಸುರೇಶ ಭೂಮರಡ್ಡಿ, ಪ್ರದೀಪಗೌಡ ಮಾಲಿಪಾಟೀಲ, ಶಂಕರ ಗೆಜ್ಜಿ, ಮೈಲೈಕ್ ಜಿಲಾನ್, ಪೀರಸಾಬ ಬೆಳಗಟ್ಟಿ, ಮಂಜು ಗಡಾದ, ಇನ್ನಿತರರು ಉಪಸ್ಥಿತರಿದ್ದರು. 
Please follow and like us:
error