ಅ. ೨೫ ರಂದು ಈಶಾನ್ಯದ ಐಸಿರಿ ೬ ನೇ ಸಂಚಿಕೆ ಪ್ರಸಾರ.

ಕೊಪ್ಪಳ ಅ. ೨೧ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ,
ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ
ಸಂಗತಿಗಳನ್ನು ಪರಿಚಯಿಸವ ಈಶಾನ್ಯದ ಐಸಿರಿ ಸರಣಿಯ ೬ ನೇ ಸಂಚಿಕೆ ಅ. ೨೫ ರಂದು ಬೆಳಿಗ್ಗೆ
೯-೫೫ ಗಂಟೆಗೆ ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ
ಪ್ರಸಾರವಾಗಲಿದೆ.
     ಈ ಕಾರ್‍ಯಕ್ರಮವನ್ನು ಕಲಬುರಗಿ ಆಕಾಶವಾಣಿ ಕೇಂದ್ರ
ರೂಪಿಸಿದ್ದು, ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು
ಪ್ರಾಯೋಜಿಸಿದೆ. ಈ ಸರಣಿಯ ೬ನೆಯ ಸಂಚಿಕೆ ದಿನಾಂಕ ೨೫-೧೦-೨೦೧೫ ರಂದು ಬೆಳಿಗ್ಗೆ ೯.೫೫
ಕ್ಕೆ ಪ್ರಸಾರವಾಗಲಿದೆ. ಅಂದು ಪ್ರಧಾನಿಯವರ ‘ಮನ್ ಕಿ ಬಾತ ‘ ಪ್ರಸಾರವಾಗುವುದರಿಂದ ೫
ನಿಮಿಷ ಮೊದಲೇ ಅಂದರೆ ೯-೫೫ ಕ್ಕೆ  ಈಶಾನ್ಯದ ಐಸಿರಿ  ಪ್ರಸಾರ ಪ್ರಾರಂಭವಾಗಲಿದೆ.  ೬ನೇ
ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ. ಕಲಬುರ್ಗಿ ಜಿಲ್ಲಾ
ಉಸ್ತುವಾರಿ ಸಚಿವರಾದ ಡಾ. ಖಮರುಲ್ ಇಸ್ಲಾಂ ಅವರು ಭಾಗವಹಿಸಿ ತಮ್ಮ ಕನಸುಗಳನ್ನು
ಹಂಚಿಕೊಳ್ಳಲಿದ್ದಾರೆ. ಈ ಸಲದ ಸಂಚಿಕೆಯಲ್ಲಿ ತೊಗರಿ ಬೆಳೆಯಲ್ಲಿ ಇನ್ನೂ ಹೆಚ್ಚಿನ
ಸಂಶೋಧನೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಅನುದಾನದ ಬಗ್ಗೆ
ಹೇಳಲಿದ್ದಾರೆ. ಯಾದಗಿರಿಯ ಶಾಸಕ ಡಾ. ಎ.ಬಿ. ಮಲಕರಡ್ಡಿಯವರು ತಮ್ಮ ಕ್ಷೇತ್ರದ
ಸರ್ವಾಂಗೀಣ ಅಭಿವೃದ್ದಿಯ ಕುರಿತಾದ ತಮ್ಮ ಯೋಚನೆ -ಯೋಜನೆಗಳ ಕುರಿತು ಮಾತನಾಡಲಿದ್ದಾರೆ. 
ಆಸ್ತಿ ಖರೀದಿ ಮಾಡುವಾಗ ಅವಲೋಕಿಸಬೇಕಾದ ಕಾನೂನು ಕ್ರಮಗಳ ಕುರಿತು ಕಲಬುರ್ಗಿ ರಾಜ್ಯ
ಹೈಕೋರ್ಟಿನ ನ್ಯಾಯವಾದಿ ಪಿ. ವಿಲಾಸಕುಮಾರ ಅವರು ತಿಳಿಸಿಕೊಡಲಿದ್ದಾರೆ.  ಬೆಂಗಳೂರಿನ
ಅಕ್ಷರ ಫೌಂಡೇಶನ್ನಿನ ಕ್ಷೇತ್ರ ಕಾರ್‍ಯದ ಮುಖ್ಯಸ್ಥರಾಗಿರುವ ಶಂಕರ ನಾರಾಯಣ ಅವರು
ಶಾಲೆಗಳಲ್ಲಿ ಕೈಗೊಳ್ಳಲಾಗಿರುವ ಗಣಿತ ಕಲಿಕಾ ಆಂದೋಲನದ ಕುರಿತು ಹೇಳಲಿದ್ದಾರೆ. 
ಪರಿಣಿತಾ ಗುಂಪಿನ ಮಹಿಳೆಯರು ಈ ಸಲ ಆಲೂಗಡ್ಡೆಯ ರಸ ಪಲ್ಯೆಯ ತಯಾರಿಕೆ, ಜೇನುತುಪ್ಪ ಹಾಗೂ
ಲಿಂಬೆ ಹಣ್ಣುಗಳ ಔಷಧೀಯ ಮಹತ್ವ ಹಾಗೂ ಸರೋಜಿನಿ ನಾಯ್ಡು ಅವರ ಬಗ್ಗೆ ಮಾತುಕತೆ
ನಡೆಸಲಿದ್ದಾರೆ.  ಯುವ ಪ್ರತಿಭಾವಂತ ಗಾಯಕರಾಗಿರುವ ಅನಂತರಾಜ ಮೇಸ್ತ್ರಿಯವರ  ಜೊತೆಗಿನ
ಮಾತುಕತೆ ಮೂಡಿ ಬರಲಿದೆ.  ಕುಷ್ಟಗಿ ತಾಲುಕಾ ತೆಗ್ಗಿಹಾಳ ಗ್ರಾಮದ ಹಿರಿಯ ಜನಪದ
ಕಲಾವಿದರಾಗಿರುವ ಬಸಪ್ಪ ಚೌಡಕಿಯವರಿಂದ ಚೌಡಕಿ ಪದವನ್ನು ಕೇಳಬಹುದು.
   
ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ
ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ,
ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ
ಬರಲಿವೆ.
    ಸರಣಿಯ ನಿರೂಪಣಾ ಸಾಹಿತ್ಯ, ನಿರ್ವಹಣೆ ಹಾಗೂ ನಿರ್ಮಾಣದ
ಜವಬ್ದಾರಿಯನ್ನು ಕಾರ್ಯಕ್ರಮ ಅಧಿಕಾರಿಯಾಗಿರುವ ಸೋಮಶೇಖರ ಎಸ್. ರುಳಿ ಅವರು
ವಹಿಸಿಕೊಂಡಿದ್ದಾರೆ  ಎಂದು ನಿಲಯದ ಮುಖ್ಯಸ್ಥೆಯಾಗಿರುವ ಅಂಜನಾ ಯಾತನೂರು ಅವರು ತಿಳಿಸಿದ್ದಾರೆ.
Please follow and like us:
error