ಮೆಕ್ಕೆಜೋಳದಲ್ಲಿ ಕಾಂಡ ಕೊರೆಯುವ ಹುಳುವಿನ ಬಾಧೆ ನಿರ್ವಹಣೆಗೆ ರೈತರಿಗೆ ಸಲಹೆಗಳು.

ಕೊಪ್ಪಳ
ಸೆ. ೧೪ (ಕ ವಾ) ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಂಡ ಕೊರೆಯುವ
ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳ ಕೃಷಿ ವಿಸ್ತರಣಾ
ಶಿಕ್ಷಣ ಕೇಂದ್ರ ವತಿಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
     ಕೊಪ್ಪಳ ಕೃಷಿ
ವಿಸ್ತರಣಾ ಶಿಕ್ಷಣ ಮುಖ್ಯಸ್ಥ ಡಾ. ಎಂ.ಬಿ ಪಾಟೀಲ ಮತ್ತು ವಿಷಯ ತಜ್ಞ
ಕೀಟಬಾಧೆ ಲಕ್ಷಣಗಳು : ಕೀಟ ಬಾಧೆ ಇರುವ ಗಿಡಗಳ ಎಲೆ ಸುಳಿಗರಿಗಳಲ್ಲಿ
ಸಣ್ಣ ರಂಧ್ರಗಳು ಕಂಡು ಬರುತ್ತವೆ. ಕ್ರಮೇಣ ಅಂತಹ ಸುಳಿಗಳು ಒಣಗುತ್ತವೆ. ಸುಳಿಗಳನ್ನು
ಕಿತ್ತಿದರೆ ಸರಳವಾಗಿ ಬರುತ್ತವೆ. ಇದು ಮುಖ್ಯವಾಗಿ ಕಾಂಡ ಕೊಳೆತು ಸುಳಿ ಸಾಯುತ್ತದೆ.
ನಿರ್ವಹಣಾ
ಕ್ರಮಗಳು : ಕೀಟಬಾಧೆಯ ನಿರ್ವಹಣೆ ಕ್ರಮ ಇಂತಿದೆ.  ೨೦-೨೫ ದಿನದ ಬೆಳೆಗಳಿಗೆ ಪ್ರತಿ
ಲೀಟರ್ ನೀರಿನಲ್ಲಿ ೨ ಮಿ. ಲೀ, ಕ್ಲೋರ್‌ಪೈರಿಫಾಸ್ ಬೆರೆಸಿ ಸಿಂಪರಿಸಬೇಕು. 
ಹೆಕ್ಟೇರಿಗೆ ೭.೫ ಕಿ. ಗ್ರಾಂ ಪೋರೆಟ್ ಶೇ. ೧೦ ರ ಹರಳನ್ನು ಎಲೆ ಸುರಳಿಯಲ್ಲಿ ಹಾಕಬೇಕು.
ಕೀಟದ ಬಾಧೆ ಪುನಃ ಕಂಡು ಬಂದಲ್ಲಿ ೨ ವಾರಗಳ ನಂತರ ಮತ್ತೊಮ್ಮೆ ಇದೆ ಕ್ರಮ
ಅನುಸರಿಸಬೇಕು.
     ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ
ಕೇಂದ್ರದ ವಿಷಯ ತಜ್ಞರಾದ ರೋಹಿತ್ ಕೆ.ಎ (೯೮೪೫೧೯೪೩೨೫) ಮತ್ತು ಯೂಸುಫ್ ಅಲಿ ನಿಂಬರಗಿ
(೯೯೦೧೬೪೯೨೨೪) ಇವರನ್ನು ಸಂಪರ್ಕಿಸಬೇಕೆಂದು ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ
(೯೪೮೦೬೯೬೩೧೯).

ಯೂಸುಫ್‌ಅಲಿ
ನಿಂಬರಗಿ ಮತ್ತು ರೋಹಿತ್ ಕೆ.ಎ ಅವರು ಹನುಮನಹಳ್ಳಿ ಮತ್ತು ಗುಳದಳ್ಳಿ ಗ್ರಾಮಗಳಿಗೆ ಭೇಟಿ
ನೀಡಿ ಪರಿಶೀಲಿಸಿದ್ದು, ಮೆಕ್ಕೆಜೋಳ ಬೆಳೆಯಲ್ಲಿ ಕಾಂಡ ಕೊರೆಯುವ ಹುಳುವಿನ ಬಾಧೆ
ಕಂಡುಬಂದಿದೆ.

Please follow and like us:
error