ವಿದ್ಯಾರ್ಥಿಗಳ ಸರ್ವೊತೋಮುಖ ಬೆಳವಣಿಗೆಗೆ ಕ್ರೀಡೆಗಳು ಅವಶ್ಯ – ಟಿ.ಶಿವಮೂರ್ತಿ.

ಕೊಪ್ಪಳ- 03- ವಿದ್ಯಾರ್ಥಿಗಳ ಸರ್ವೊತೊಮುಖ ಬೆಳವಣಿಗೆಗೆ ಕ್ರೀಡೆಗಳು ಅವಶ್ಯ. ಆಟಗಳು ವಿದ್ಯಾರ್ಥಿಗಳ ಸೃಜನ ಶೀಲತೆಗೆ ಕಾರಣವಾಗುತ್ತವೆ. ಆಟಗಳಿಂದ ಮಕ್ಕಳು ಸಾಮಾಜಿಕ ಹೊಂದಾಣಿಕೆಯ ಗುಣಗಳನ್ನು ಬೆಳಸಿಕೊಳ್ಳುವರು ನಾಯಕತ್ವದ ಸಾಮರ್ಥಗಳು ಒಡಮೂಡುತ್ತವೆ. ಸದೃಡ ದೇಹವನ್ನು ಹೊಂದುವ ಮೂಲಕ ಸದೃಢ ಮನಸ್ಸು ರೂಪಗೊಳ್ಳುತ್ತ
    ಅವರು ಕೊಪ್ಪಳ ತಾಲೂಕಿನ ಅಳವಂಡಿಯ ಸಿದ್ದೇಶ್ವರ ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ತಾಲೂಕ  ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
    ಅಳವಂಡಿ ಕಟ್ಟಿಮನಿ ಹಿರೇಮಠ ಷ||ಬ|| ೧೦೮ ಸಿದ್ದಲಿಂಗ ಶಿವಾಚಾರ್ಯರರು ಪಟ್ಟಧ್ಯಕ್ಷರು ಇವರು ಕ್ರೀಡಾ ದ್ವಜಾರೋಹಣವನ್ನು ನೆರವೆರಿಸಿದರು. ಕ.ವಿ.ಸಮಿತಿಯ ಕಾರ್ಯದರ್ಶಿಗಳಾದ ರೇವಣಸಿದ್ದೇಶ್ವರ ಸ್ವಾಮಿಗಳು ಕ್ರೀಡಾ ಜೋತಿಯನ್ನು ಬೆಳಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ವಿ.ಸಮಿತಿಯ ಅಧ್ಯಕ್ಷರಾದ ಭುಜಂಗಸ್ವಾಮಿ ಇನಾಮದಾರ ವಹಿಸಿದರು. ವಿಶ್ರಾಂತ ಪ್ರಾಚಾರ್ಯರಾದ ಎಸ್.ಬಿ.ರಾಜೂರು ಸರ, ಪ್ರಾಚಾರ್ಯರಾದ ವಿ.ಬಿ.ರಡ್ಡೇರ, ಎ.ಜಿ.ಶರಣಪ್ಪ, ಎಮ್.ಶಮ್‌ಸುದ್ದಿನ ಆಯ್ ಆಮ್ ಚಿಕ್ಕರಡ್ಡಿ, ಅಮೀನ್‌ಸಾಬ ಸೂಡಿ, ವಿ.ಸಿ ಬೆನ್ನಳ್ಳಿ, ಹಿರಿಯರಾದ ಗುರು ಬಸವರಾಜ ಲಿಂಗನಗೌಡ್ರ., ರಂಗಪ್ಪ ಕರಡಿ, ಎ.ಟಿ.ಕಲ್ಮಠ, ಸುರೇಶ ಸಂಗರಡ್ಡಿ ಮೊದಲಾದ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ಕೊಪ್ಪಳ ತಾಲೂಕಿನ  ೧೮ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ ಉಪನ್ಯಾಸಕರು ಹಾಗೂ ಕ್ರೀಡಾ ಪಟುಗಳು ಉಪಸ್ಥಿತರಿದ್ದರು.

ದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಟಿ.ಶಿವಮೂರ್ತಿ ಹೇಳಿದರು.

Related posts

Leave a Comment