ಬಸವಣ್ಣನವರು ಜಗತ್ತಿನ ಸರ್ವ ಶ್ರೇಷ್ಠಸಂತ – ಗವಿಶ್ರೀಗಳು.

ಬಸವಣ್ಣನವರು ಜಗತ್ತಿನ ಸರ್ವ ಶ್ರೇಷ್ಠ ಸಂತರಾಗಿದ್ದಾರೆ ಎಂದು   ಮ.ನಿ. ಪ್ರ.  ಜಗದ್ಗುರು  ಶ್ರೀ ಗವಿಸಿದ್ಧೇಶ್ವರ  ಶ್ರೀಗಳು  ಹೇಳಿದರು.  ಅಜ್ಜಂಪುರ ಶೆಟ್ರು  ಸೇವಾ ಟ್ರಸ್ಟ್  (ರಿ), ಬಸವ  ಬಳಗ (ರಿ), ದಾವಣಗೆರೆ ಮತ್ತು  ವಿಶ್ವಗುರು  ಬಸವೇಶ್ವರ ಟ್ರಸ್ಟ್ , ಬಸವ ಸಮಿತಿ ಮತ್ತು  ಕದಳಿ ಮಹಿಳಾ ವೇದಿಕೆ  ಕೊಪ್ಪಳ  ಇವರು ಆಯೋಜಿಸಿರುವ    ದಿನಾಂಕ ೯.೧೦.೨೦೧೫ ಬೆಳಿಗ್ಗೆ ೧೦ ಗಂಟೆಗೆ  ನಗರದ ಶಿವಶಾಂತ ಮಂಗಲ ಭವನದಲ್ಲಿ ಶಿವಾನುಭವ ಶಿಬಿರ ಕಾರ್ಯಕ್ರಮವನ್ನು    ಉದ್ಘಾಟಿಸಿ ನಂತರ ಮೇಲಿನಂತೆ ಹೇಳಿದರು. ಮಾನವರು  ಯಾಂತ್ರಿಕ  ಬದುಕು  ಹೇಗೆ  ಬದುಕಬೇಕೆಂದು ಚಿಂತನೆ  ಮಾಡುತ್ತವೆ. ಆದರೆ  ಶರಣರು ಹೃದಯ-ಹೃದಯ ಸಂಬಂಧ ಹೊಂದಿದ ಭಿನ್ನವಾದ  ಬದುಕನ್ನು ಬದುಕುವ ಕಲೆ  ತೋರಿಸಿ ಕೊಟ್ಟವರು  ಎಂದು ಹೇಳಿದರು. ಇಂತಹ  ಕಾರ್ಯಕ್ರಮ  ನಡೆಸುತ್ತಿರುವ  ಅಜಂಪೂರ ಟ್ರಸ್ಟ್ ದಾವಣಗೆರೆ  ಇವರು ಹಮ್ಮಿಕೊಂಡ ಈ  ಕಾರ್ಯ ಅನುಕರಣಿಯವಾದದ್ದು  ಎಂದು  ಹೇಳಿದರು.   
    ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಸಂಸದರಾದ  ಸಂಗಣ್ಣ  ಕರಡಿಯವರು  ಮನುಷ್ಯ ದಿನದಿಂದ  ದಿನಕ್ಕೆ  ಸ್ವಾರ್ಥಿಯಾಗುತ್ತಿದ್ದು  ಇಂತಹ  ಶಿಬಿರಗಳಿಂದ  ಮನಷ್ಯ  ಸಂಸ್ಕಾರವಂತನಾಗಲು 
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಶರಣ ವಿ.ಸಿದ್ಧರಾಮಣ್ಣನವರು  ಜಗತ್ತಿನ ಸರ್ವಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರಗಳಿವೆ. ಅಂತಹ ಅದ್ಭುತ ಸಾಹಿತ್ಯ ಪ್ರಕಾರ  ವಚನ ಸಾಹಿತ್ಯ  ವಾಗಿದೆ  ಎಂದು  ಹೇಳಿದರು.
    ವಿಶ್ವಗುರು ಬಸವೇಶ್ವರ ಟ್ಟಸ್ಟಿನ  ಅಧ್ಯಕ್ಷರಾದ  ಬಸವರಾಜಪ್ಪ ಇಂಜಿನಿಯರ್, ಬಸವ ಸಮಿತಿ ಅಧ್ಯಕ್ಷರಾದ  ಬಸವರಾಜ ಬಳ್ಳೊಳ್ಳಿ   ಲಿಂಗಾಯತ  ಪ್ರಗತಿಶೀಲ ಸಂಘದ  ಅಧ್ಯಕ್ಷರಾದ ದಾನಪ್ಪ  ಶೆಟ್ಟರ್, ಅಖಿಲ ಭಾರತ ಶರಣ ಸಾಹಿತ್ಯ  ಪರಿಷತ್ತ ರಾಜ್ಯ ಕಾರ್ಯದರ್ಶಿಗಳಾದ ಶ್ರೀಶೈಲ  ಪಟ್ಟಣಶೆಟ್ಟರ್ , ದಾವಣಗೆರೆ ಅಜಂಪೂರ  ಸೇವಾ  ಟ್ರಸ್ಟ್‌ನ ಕಾರ್ಯದರ್ಶಿಗಳಾದ ಶಂಬಣ್ಣ ಅಜಂಪೂರ ಶೆಟ್ರ, ಅಖಿಲಭಾರತ  ವೀರಶೈವ  ಮಹಾಸಭೆ ಅಧ್ಯಕ್ಷರಾದ ಗುರುರಾಜ ಹಲಗೇರಿ, ಬಸವ ಬಳಗ ಅಧ್ಯಕ್ಷರಾದ ಶ್ರೀ ದೇವಿಗೆರೆ  ವೀರಭದ್ರಪ್ಪನವರು  ವೇದಿಕೆಯಲ್ಲಿದ್ದರು.
    ಶಿವಕುಮಾರ ಕುಕನೂರ  ನಿರೂಪಿಸಿದರು ಬಸವರಾಜ ಬಳ್ಳೊಳ್ಳಿ ಸ್ವಾಗತಿಸಿದರು. ಗವಿಸಿದ್ದಪ್ಪ  ಪಲ್ಲೇದ  ವಂದಿಸಿದರು.

ಸಾಧ್ಯವಿದೆ  ಎಂದು ಹೇಳಿದರು.

Please follow and like us:
error