fbpx

ಟಿಪ್ಪು ಟ್ರೋಫಿ ಬ್ಲೂ ಸ್ಟಾರ್ ಮಡಿಲಿಗೆ.

ಕೊಪ್ಪಳ,- ನ,೦೯- ಕ್ರೀಡೆ ಜೀವನದ ಅವಿಭಾಜ್ಯ ಅಂಗ ಸಯ್ಯದ್ ಮನುಷ್ಯನ ದೈಹಿಕ ಸಧೃಡತೆಗಾಗಿ ಕ್ರೀಡಾ ಚಟುವಟಿಕೆ ಅತ್ಯಂತ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಪತ್ರಿಯೊಬ್ಬ ಮನುಷ್ಯ ಪಾಲ್ಗೊಳ್ಳುವುದು ಅವಶ್ಯಕವಾಗಿದೆ ಕ್ರೀಡೆಯಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಮಾಡಲು ಸಾಧ್ಯವಾಗಿದ್ದು ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
  ಅವರು ಕೊಪ್ಪಳನಗರದ ಕ್ರೀಡಾಂಗಣದಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿ ಪ್ರಯುಕ್ತ ಕೊಪ್ಪಳದ ಯುವಕರ ತಂಡ ಏರ್ಪಡಿಸಿದ ಟಿಪ್ಪು ಟ್ರೋಫಿ-೨೦೧೫ರ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಿ ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿ ವಿತರಣೆಮಾಡಿ ಮಾತನಾಡಿದರು.
  ಮೂಮದುವರೆದು ಮಾತನಾಡಿದ ಅವರು ದೈಹಿಕ ಮಾನಸಿಕ ಸಧೃಡತೆಗಾಗಿ ಕ್
 ಟಿಪ್ಪು ಟ್ರೋಫಿ ಅಂತಿಮ ಪಂದ್ಯದಲ್ಲಿ ಬ್ಲೂ ಸ್ಟಾರ್ ತಂಡ ಪ್ರಥಮ ಬಹುಮಾನ ಮತ್ತು ಕೆ.ಎಂ.ಸಯ್ಯದ್ ವತಿಯಿಂದ ೧೦ ಸಾವಿರ ರೂ.ನಗದು ಬಹುಮಾನ ಪಡೆದುಕೊಂಡರೆ. ಜೋಹಾ ಕ್ರೀಕೆಟ್ ತಂಡ ೨ನೇ ಬಹುಮಾನ ಮತ್ತು ೫ಸಾವಿರ ನಗದು ಬಹುಮಾನವನ್ನು ಅಂಜುಮನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್ ರವರಿಂದ ಪಡೆದುಕೊಂಡರು. ಸರಣಿ ಪುರುಷ ಪ್ರಶಸ್ತಿ ಜುಲ್ಫಿಕಾರ್ ಪಡೆದರೆ ಇಮ್ರಾನ್ ಮೋಟೊರೋಲೋ ರವರು ಬೆಸ್ಟೆ ಬಾಲರ್, ಪ್ರಶಾಂತ ಬೆಸ್ಟ್ ಬ್ಯಾಟ್ ಮೆನ್, ಪಂದ್ಯ ಪುರುಷ ಪ್ರಶಸ್ತಿಯನ್ನು ಶಾಬುದೀನ್ ರವರು ಪಡೆದುಕೊಂಡರು.
  ಸಯ್ಯದ್ ಪರವೇಜ ಖಾದ್ರಿರವರು ಕೂಡಾ ತಮ್ಮ ವಯುಕ್ತಿಕ ನಗದು ಬಹುಮಾನ ೨ ಸಾವಿರ ರೂ ಸೇರಿದಂತೆ  ಬಹುಮಾನ ವಿತರಣೆ ಮಾಡಿದರು. ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ  ಕೆ.ಎಂ.ಸಯ್ಯದ್ ಸೇರಿದಂತೆ ಎಮ.ಪಾಷಾ ಕಾಟನ್, ಸಯ್ಯದ್ ಪರವೇಜ್ ಖಾದ್ರಿ ಮಾನವಿ ಪಾಷಾ, ಖಾಜಾವಲಿ ಬನ್ನಿಕೊಪ್ಪ, ದಸ್ತಗೀರ ಸಾಹೇಬ್, ಪೀರಾ ಹುಸೇನ ಚಿಕನ್, ಅಬಿದ್ ಪಟೇಲ್ ಅಲ್ಲದೆ ಕ್ರೀಡಾ ಪಟು ಮಹೇಮೂದ್ ಹುಸೇನಿ ಅನೇಕರು ಪಾಲ್ಗೊಂಡಿದ್ದರು.

ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಕೊಪ್ಪಳದಲ್ಲಿ ಕ್ರೀಡಾಸಕ್ತಿಯುಳ್ಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಕ್ರೀಯಾಶೀಲ ಚಟುವಟಿಕೆಯಲ್ಲಿ ಯುವಕರು ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತಹ ಕೆಲಸ ಮಾಡಬೇಕೆಂದು ಯುವಕರಿಗೆ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು

Please follow and like us:
error

Leave a Reply

error: Content is protected !!