ಕಲ್ಯಾಣ ಕರ್ನಾಟಕ ದ್ವಿತಿಯ ಸಾಹಿತ್ಯ ಸಮ್ಮೇಳನ.

ಕೊಪ್ಪಳ, ಫೆ. ೨೫. ದ್ವಿತಿಯ ಕಲ್ಯಾಣ ಕರ್ನಾಟಕ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಭವನದಲ್ಲಿ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದೆ. ಪ್ರಥಮ ಕಲ್ಯಾಣ ಕರ್ನಾಟಕ ಸಾಹಿತ್ಯ ಸಮ್ಮೇಳನವನ್ನು ಸಾಹಿತ್ಯ ಭವನದಲ್ಲಿ ಅದ್ಧೂರಿಯಾಗಿ ಕನ್ನಡದ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪರಂಥವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ, ನಮ್ಮ ಸಂಸ್ಥೆಯಿಂದ ಮಾಡಿದ್ದು, ಅಭೂತಪೂರ್ವ ಯಶಸ್ವಿಯಾಯಿತು. ಅದು ರಾಜ್ಯದಲ್ಲಿ ದೊಡ್ಡ ಸುದ್ದಿಯೂ ಆಯಿತು. ಇದೇ ವೇಳೆ ಶ್ರೀಮತಿ ಮಧು ಮಲ್ಲಿಕಾರ್ಜುನ ಬಂಡೆಯವರನ್ನು ಕರೆಸಿ ೧೧ ಸಾವಿರ ನಗದು ನೀಡಿ ಪ್ರಥಮ ಗಂಡುಗಲಿ ಕುಮಾರರಾಮ ಶೌರ್ಯ ಪ್ರಶಸ್ತಿಯನ್ನು ನೀಡಲಾಯಿತು. ಈ ಭಾರಿಯು ಸಹ ವಿವಿಧ ಪ್ರಶಸ್ತಿಗಳನ್ನು ನೀಡಲು ಸಿದ್ಧತೆ ಆರಂಭಿಸಲಾಗಿದ್ದು, ಕಾರ್ಯಕ್ರಮದಲ್ಲಿ ಖ್ಯಾತ
ಚಲನಚಿತ್ರ ಕಲಾವಿದರು, ಪತ್ರಕರ್ತರು, ರಾಷ್ಟ್ರಮಟ್ಟದ ಸಂಗೀತ ಕಲಾವದರು, ಮಹಾಸ್ವಾಮಿಗಳು
ಪಾಲ್ಗೊಳ್ಳುವರು. ಎರಡನೆ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಈ ಭಾರಿ ಕೊಪ್ಪಳ
ಜಿಲ್ಲೆಯವರೇ ಆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕ ಅಕಾಡೆಮಿ ಮಾಜಿ ಸದಸ್ಯ ಹಿರಿಯ
ಸಾಹಿತಿಗಳಾದ ಗಂಗಾವತಿಯ ಎಸ್. ವಿ. ಪಾಟೀಲ ಗುಂಡೂರವರಿಗೆ ನೀಡಲಾಗಿದೆ. ಮಾರ್ಚ್
ತಿಂಗಳಲ್ಲಿ ಸಮ್ಮೇಳನ ಮಾಡಲು ನಿರ್ಧಾರ ಮಾಡಿದ್ದು ಹಲವಾರು ಗೋಷ್ಠಿ, ವಚನ ಗೋಷ್ಠಿ, ಕವಿ
ಗೋಷ್ಠಿ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಾರ್ವಜನಿಕರು, ಸಾಹಿತಿಗಳು ಸಲಹೆ
ಮತು ಮಾರ್ಗದರ್ಶನ ನೀಡುವಂತೆ ಕಾರ್ಯಕ್ರಮ ಸಂಘಟಕ ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ
ಕೊಪ್ಪಳ ಕೋರಿದ್ದಾರೆ.

Please follow and like us:
error